ಬೈಂದೂರು : ಜಲ ಸಂಪನ್ಮೂಲ ಇಲಾಖೆಯ 2022 -23ರಲ್ಲಿ ಅನುಮೋದನೆಗೊಂಡು ಪ್ರಸ್ತುತ ತಡೆ ಹಿಡಿದಿರುವ ಬೈಂದೂರು ವಾರಾಹಿ ಕಾಲುವೆ ದುರಸ್ಥಿ ಹಾಗೂ ವೈಯುಕ್ತಿಕ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿ ಶಾಸಕರ ಬೇಡಿಕೆಯ ಮೇರೆಗೆ ಕಾಮಗಾರಿ ನಡೆಸಲು ಅನುಮತಿಗಾಗಿ ಪರಿಶೀಲಿಸುವ ಉತ್ತರ ಸರ್ಕಾರ ಒದಗಿಸಿದೆ. ವಾರಾಹಿ ಕಾಲುವೆ ದುರಸ್ತಿ ಕಾಮಗಾರಿಗಳು ಹಾಗೂ ವೈಯುಕ್ತಿಕ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸುವ ಸಂಬಂಧ ಪರಿಶೀಲನೆ ಹಂತದಲ್ಲಿವೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ. ಕೆ ಶಿವಕುಮಾರ್ ರವರು ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ. ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆಯವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು 2022-23 ನೇ ಸಾಲಿನಲ್ಲಿ ಅನುಮೋದನೆಗೊಂಡು ಸರಕಾರದ ಸುತ್ತೋಲೆ ಅನ್ವಯ ತಡೆ ಹಿಡಿದಿರುವ ಉಡುಪಿ ಜಿಲ್ಲೆಯ ವಾರಾಹಿ ಕಾಲುವೆಯ ದುರಸ್ಥಿ ಕಾಮಗಾರಿ ಅಗತ್ಯತೆ ಹಾಗೂ ಅನುದಾನ ಲಭ್ಯತೆಯನ್ನು ಪರಿಗಣಿಸಿ ತಡೆ ಹಿಡಿದಿರುವ Non grounded ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡುವ ಕುರಿತು ಪರಿಶೀಲಿಸಲಾಗುತ್ತಿದೆ. ಹಾಗೂ 2022-23 ನೇ ಸಾಲಿನಲ್ಲಿ ಎಸ್.ಸಿ. ಪಿ ಯೋಜನೆಯಡಿ ಹಂಚಿಕೆ ಯಾಗಿರುವ ರೂ. 1.5 ಕೋ.ರೂ.ಗಳಲ್ಲಿ ನೀರಾವರಿ ಸೌಲಭ್ಯ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದರು