Categories
ಕರಾವಳಿ ಸುದ್ದಿ

ಆನೆಗುಡ್ಡೆ ಕ್ಷೇತ್ರದಲ್ಲಿ ಭಕ್ತರ ಗಢಣ

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿಯ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಇಂದು ಚೌತಿ ಮಹೋತ್ಸವದ ಪ್ರಯುಕ್ತ ಭಕ್ತರ ಗಢಣವೇ ಸೇರಿತ್ತು

ಇಂದು ದೇವಸ್ತಾನಕ್ಕೆ ನಿರೀಕ್ಷೆಗೂ ಮೀರಿ ಭಕ್ತರ ಆಗಮನವಾಗಿದ್ದು ಶ್ರೀದೇವರ ದರ್ಶನ ಪಡೆದು ಭಕ್ತರು ಪುನೀತರಾದರು ನಿರೀಕ್ಷೆಗೂ ಮೀರಿದ ಭಕ್ತರ ಆಗಮನವಾದರೂ ಯಾವುದೇ ಗೊಂದಲಗಳಿಲ್ಲದೇ ಶ್ರೀ ದೇವರ ದರ್ಶನ ಪ್ರಸಾದ ವಿತರಣೆ ಹಾಗೂ ಅನ್ನಪ್ರಸಾದ ಸೇವೆಯು ಅಚ್ಚುಕಟ್ಟಾಗಿ ನಡೆಯಿತು 

ಇಂದು ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗವು ಭಕ್ತರ ಸಮ್ಮುಖದಲ್ಲಿ ಅರ್ಚಕರ ನೇತೃತ್ವದಲ್ಲಿ ನಡೆದು ಸಂಪನ್ನಗೊಂಡಿತು

 ಆನೆಗುಡ್ಡೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿಶ್ವೇಶ್ವರ ಭಜನಾ ಸಂಘ ಆನೆಗುಡ್ಡೆ ಕುಂಭಾಶಿ ಇವರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು

30,000 ಕ್ಕೂ ಮಿಕ್ಕಿ ಭಕ್ತರು ಶ್ರೀ ದೇವರ ದರ್ಶನ ಪಡೆದು 10,000 ಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿ ಶ್ರಿ ದೇವರ ಕೃಪೆಗೆ ಪಾತ್ರರಾದರು