Home » ಕಲ್ಲಂಗಡಿ ಬೆಳೆಗಾರರ ಹಿತ ಕಾಪಾಡಲು ಸದನದಲ್ಲಿ ಪ್ರಶ್ನೆ ಮೂಲಕ ತೋಟಗಾರಿಕೆ ಸಚಿವರ ಆಗ್ರಹ ಪಡಿಸಿದ ಬೈಂದೂರು ಶಾಸಕರು
 

ಕಲ್ಲಂಗಡಿ ಬೆಳೆಗಾರರ ಹಿತ ಕಾಪಾಡಲು ಸದನದಲ್ಲಿ ಪ್ರಶ್ನೆ ಮೂಲಕ ತೋಟಗಾರಿಕೆ ಸಚಿವರ ಆಗ್ರಹ ಪಡಿಸಿದ ಬೈಂದೂರು ಶಾಸಕರು

ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯ

by Kundapur Xpress
Spread the love

ಕಲ್ಲಂಗಡಿ ಬೆಳೆ ಸೊರಗು ರೋಗ & ಕೀಟ ಬಾಧೆಗೆ ಪ್ರತ್ಯೇಕ ಮಾಹಿತಿ ಕೈಪಿಡಿ ರೈತರಿಗೆ ಒದಗಿಸಲು ಮನವಿ

ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆಯವರು ಬೈಂದೂರು ವಿಧಾನ ಸಭಾ ಕ್ಷೇತ್ರ ವಾಪ್ತಿಯಲ್ಲಿ ಪ್ರಸ್ತುತ ವರ್ಷ ಕಲ್ಲಂಗಡಿ ಹಣ್ಣಿನ ಮೊದಲ ಬೆಳೆಗೆ ಸೊರಗು ರೋಗ ತಗುಲಿ ಬೆಳೆ ಹಾನಿ ಸಂಭವಿಸಿರುವುದರಿಂದ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ಹಾಗೂ ಕಲ್ಲಂಗಡಿ ಬೆಳೆಗಾರರ ಹಿತ ಕಾಪಾಡಲು ಹಾಗೂ ಉತ್ತಮ ದರವನ್ನು ದೊರಕಿಸಿಕೊಡಲು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ತೋಟಗಾರಿಕೆ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ರವರು ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 180 ಎಕ್ರೆ ಕಲ್ಲಂಗಡಿ ಬೆಳೆ ಪ್ರದೇಶವಿದ್ದು, ಪ್ರಸ್ತುತ ವರ್ಷ ಕಲ್ಲಂಗಡಿ ಹಣ್ಣಿನ ಮೊದಲ ಬೆಳೆಗೆ ಸೊರಗು ರೋಗ ತಗುಲಿ ಕಟಾವು ಹಂತದಲ್ಲಿ 40 ಎಕ್ರೆ ಪ್ರದೇಶದಲ್ಲಿ ರೋಗ ಬಾಧೆ ಕಂಡು ಬಂದಿರುವುದಾಗಿ ಅಂದಾಜಿಸಲಾಗಿದೆ. ರೋಗ ಕಂಡು ಬಂದಿರುವ ತೋಟಗಳಲ್ಲಿ ಶೇ. 40 ರಿಂದ 50 ರಷ್ಟು ಇಳುವರಿ ಕಡಿಮೆಯಾಗಿರುವುದು ಕಂಡು ಬಂದಿದೆ. ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡುವ ಕಾರ್ಯಕ್ರಮ ಇಲಾಖೆಯಲ್ಲಿ ಇರುವುದಿಲ್ಲ ಹಾಗೂ ಕಲ್ಲಂಗಡಿ ಬೆಳೆಗಾರರ ಹಿತ ಕಾಪಾಡಲು
ರಾಷ್ಟೀಯ ತೋಟಗಾರಿಕೆ ಮಿಷನ್ ಯೋಜನೆಯಯಡಿ ಹೊಸ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೆರ್ ಗೆ ರೂ. 0.60 ಲಕ್ಷ ಘಟಕ ವೆಚ್ಚದ ಶೇ. 40 ರಂತೆ ರೂ. 0.24 ಲಕ್ಷ ಸಹಾಯಧನ ನೀಡಲಾಗುತ್ತಿದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಲು 2 ಹೆಕ್ಟೆರ್ ವರೆಗೆ ಶೇ. 90 ರಷ್ಟು ಮತ್ತು 3 ರಿಂದ 5 ಹೆಕ್ಟೆರ್ ವರೆಗೆ ಶೇ. 45 ರಷ್ಟು ಸಹಾಯಧನ ನೀಡಲಾಗುತ್ತಿದೆ.
ರಾಷ್ಟೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ಲಾಸ್ಟಿಕ್ ಹೊದಿಕೆ ಹೊದಿಸಲು ಪ್ರತಿ ಹೆಕ್ಟೆರ್ ಗೆ ರೂ. 0.40 ಲಕ್ಷ ಗಳ ಘಟಕ ವೆಚ್ಚದ ಶೇ. 50 ರಂತೆ 0.20 ಲಕ್ಷ ಸಹಾಯಧನ ನೀಡಲಾಗುತ್ತಿದೆ.
ರಾಷ್ಟೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಮಗ್ರ ಪೋಷಕಾಂಶ, ಕೀಟ/ ರೋಗಗಳ ನಿರ್ವಹಣೆಗೆ ಸಹಾಯಧನ ಮತ್ತು ಕಲ್ಲಂಗಡಿ ಸೇರಿದಂತೆ ತೋಟಗಾರಿಕಾ ಉತ್ಪನ್ನಗಳ ದರ ಕುಸಿತದ ಸಂದರ್ಭದಲ್ಲಿ ಬೆಂಬಲ ಬೆಲೆ ಯೋಜನೆಯನ್ನು ಜಾರಿ ಗೊಳಿಸಲಾಗುತ್ತದೆ. ಎಂದು ಸಚಿವರು ಉತ್ತರಿಸಿದ್ದಾರೆ.

ಸೊರಗು ರೋಗ, ಕೀಟ ಬಾಧೆ ಬಗ್ಗೆ ಮಾಹಿತಿ ಕೈಪಿಡಿ ಒದಗಿಸಲು ಮನವಿ

ಕಲ್ಲಂಗಡಿ ಬೆಳೆಗೆ ಸೊರಗು ರೋಗ, ಕೀಟ ಬಾಧೆ ಸೇರಿದಂತೆ ಇನ್ನಿತರ ರೋಗ ನಿವಾರಣೆಗೆ ಬೆಳೆಗಾರರಿಗೆ ಅಗತ್ಯ ಮಾಹಿತಿ ಗಳನ್ನೊಳಗೊಂಡ ಮಾಹಿತಿ ಕೈಪಿಡಿ ಒದಗಿಸಲು ಇದೇ ಸಂದರ್ಭದಲ್ಲಿ ಶಾಸಕರು ಸಚಿವರಿಗೆ ಮನವಿ ಮಾಡಿದ್ದಾರೆ.

 

Related Articles

error: Content is protected !!