Home » ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಜೂಜಾಟ
 

ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಜೂಜಾಟ

by Kundapur Xpress
Spread the love

ಹೇರಾಡಿ : ಗ್ರಾಮದ ಕೂಡ್ಲಿ ಪ್ರದೇಶದಲ್ಲಿ ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಮನೋರಂಜನೆ ಹಾಗೂ ಹಣ ಪಣವಾಗಿ ಕಟ್ಟಿ ಜೂಜಾಟ ನಡೆಯುತ್ತಿದೆ ಎಂಬ ರಹಸ್ಯ ಮಾಹಿತಿ ಮೇರೆಗೆ, ಬ್ರಹ್ಮಾವರ ಪೊಲೀಸ್ ಠಾಣೆಯ ಎಎಸ್ಐ ಜಯಕುಮಾರ್ ಅವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿ ಸ್ಥಳಕ್ಕೆ ಧಾಳಿ ನಡೆಸಿದರು.ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಅಲ್ಲಿ ಇದ್ದವರು ಓಡಿಹೋದರೂ, ಇಬ್ಬರನ್ನು ಸ್ಥಳದಲ್ಲೇ ಬಂಧಿಸಲಾಯಿತು. ಬಂಧಿತರಾದ ಪ್ರಶಾಂತ್ ಮತ್ತು ರಾಘವೇಂದ್ರ ಇವರಿಂದ ರೂ.2,120 ನಗದು, ಎರಡು ಕೋಳಿಗಳು, ಕೋಳಿಯ ಕಾಲಿಗೆ ಕಟ್ಟಿದ್ದ ಬಾಲ್‌ಗಳು ಹಾಗೂ ನೈಲಾನ್ ಹಗ್ಗಗಳನ್ನು ವಶಪಡಿಸಿಕೊಂಡಿದ್ದಾರೆ.ಮತ್ತಷ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗೆ ತನಿಖೆ ಮುಂದುವರಿದಿದೆ.ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Related Articles

error: Content is protected !!