Home » ವಂಚನೆ ಪ್ರಕರಣದ ವಾರೆಂಟ್ ಆರೋಪಿ ಬಂಧನ
 

ವಂಚನೆ ಪ್ರಕರಣದ ವಾರೆಂಟ್ ಆರೋಪಿ ಬಂಧನ

by Kundapur Xpress
Spread the love

ಉಳ್ಳಾಲ : ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಳಿಕ ಕೋರ್ಟಿಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಂಚನೆ ಪ್ರಕರಣದ ವಾರೆಂಟ್ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀಶ ಬಾಬು(48) ಬಂಧಿತ ಆರೋಪಿ ಎಂದು ತಿಳಿಯಲಾಗಿದೆ.

ಈತನನ್ನು ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಯ ತಂಡವು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ಮಂಗಳೂರು ನಗರದ ಏಳನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

 

Related Articles

error: Content is protected !!