ಕುಂದಾಪುರ: ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಕಳೆದ ಭಾನುವಾರ ನೀರುಪಾಲಾದ ಶರತ್ ಮೃತದೇಹ ಇಂದು ಬೆಳ್ಳಿಗೆ ಪತ್ತೆಯಾಗಿದೆ.ಜುಲೈ 23 ರಂದು ಕೊಲ್ಲೂರಿನ ಅರಶಿನ ಗುಂಡಿ ಜಲಪಾತದಲ್ಲಿ ಶರತ್ ಕಾಲು ಜಾರಿ ನಾಪತ್ತೆಯಾಗಿದ್ದರು.
ಪೊಲೀಸರು, ಅಗ್ನಿಶಾಮಕ ದಳ, ಮುಳುಗು ತಜ್ಞ ಈಶ್ವರ್ ಮಲ್ಪೆ, ಕೋತಿರಾಜ್ ಹಾಗೂ ಎನ್ಡಿಆರ್ಎಫ್ ತಂಡದಿಂದ ಸತತವಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಅಲ್ಲದೆ ಡ್ರೋಣ್ ಮೂಲಕ ಕೂಡ ಹುಡುಕಾಟ ನಡೆಸಿದ್ದು ಇಂದು ಶರತ್ ಮೃತದೇಹ ಅರಶಿನ ಗುಂಡಿ ಜಲಪಾತದಿಂದ 200 ಮೀಟರ್ ಕೆಳಗಡೆ ಪತ್ತೆಯಾಗಿದೆ. ಶರತ್ ಮೃತದೇಹ ಬಂಡೆ ಕಲ್ಲಿನ ಒಳಗಡೆ ಸಿಲುಕಿ ಹಾಕಿಕೊಂಡಿದ್ದು ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರ ಕಾರ್ಯಚರಣೆಯ ವೇಳೆ ಪತ್ತೆಯಾಗಿದೆ.