ಕುಂದಾಪುರ: ಹಿರಿಯ ಪತ್ರಕರ್ತ ಶಶಿಧರ ಹೆಮ್ಮಣ್ಣ (57 ವರ್ಷ) ಅವರು ಹೃದಯಾಘಾತದಿಂದ ನಿಧನ ಹೊಂದಿದರು ಗುರುವಾರ ಬೆಳಿಗ್ಗೆ ಉಡುಪಿಯ ತನ್ನ ಸ್ವಗ್ರಹದಲ್ಲಿ ದಿಢೀರ್ ಆಗಿ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಮನೆಯವರು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಹೃದಯಾಘಾತ ಧೃಢಪಟ್ಟ ಹಿನ್ನಲೆಯಲ್ಲಿ ಹೆಚ್ಚಿನ ಚಕಿತ್ಸೆಗಾಗಿ ಅವರನ್ನು ಮಣಿಪಾಲದ ಕೆ ಎಂ ಸಿ ಗೆ ದಾಖಲಿಸಲಾಯಿತು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಮ್ಮಣ್ಣನವರು ರಾತ್ರಿಯ ವೇಳೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದರು
1991ರಲ್ಲಿ ಕುಂದಾಪುರದ ಕುಂದಪ್ರಭ ಪತ್ರಿಕೆಯ ಮೂಲಕ ವೃತ್ತಿ ಜೀವನ ಅರಂಭಿಸಿದ ಅವರು ಕ್ಷಿತಿಜ ವಾರಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿದ್ದರು ಇತ್ತೀಚಿಗಷ್ಟೇ ಅವರು ಕನೆಕ್ಟ್ ಮೀಡಿಯಾ ಸಂಸ್ಥೆಯನ್ನು ಪ್ರಾರಂಭಿಸಿದ್ದರು