ಕುಂದಾಪುರ : ಎತ್ತಿ ಆಡಿಸಿ ಮುದ್ದು ಮಾಡಿದ ತಾತನ ಸಾವಿನ ಸುದ್ದಿ ಕೇಳಿ ಚಾಮರಾಜನಗರದಿಂದ ಕುಂದಾಪುರದ ಶೇಡಿಮನೆಗೆ ತನ್ನ ಬುಲ್ಲೆಟ್‌ನಲ್ಲಿ ಆಗಮಿಸಿದ ವ್ಯೆದ್ಯಕೀಯ ವಿದ್ಯಾರ್ಥಿಯೋರ್ವ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟು ತಾತನ ಅಂತ್ಯಕ್ರೀಯೆಯಲ್ಲಿ ಜೊತೆಯಾದ ಹೃದಯ ವಿದ್ರಾವಕ ಘಟನೆ ಸೋಮವಾರ ನಡೆದಿದೆ
ಕುಂದಾಪುರದ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಸಿಸ್ಟೆಂಟ್ ಜನರಲ್ ಮೆನೇಜರ್ ಆದ ಚೆನ್ನ ಪೂಜಾರಿ ಹಾಗೂ ಇಂದಿರಾರವರ ಏಕೈಕ ಪುತ್ರನಾದ ನಿತೀಶ್ ಪೂಜಾರಿ
ಚಾಮರಾಜನಗರದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ 2ನೇ ವರ್ಷದ ವ್ಯಾಸಂಗ ಮಾಡುತ್ತಿದ್ದು ತಾತನ ಸಾವಿನ ಸುದ್ದಿ ಕೇಳಿ ತಾನು ಊರಿಗೆ ಬರುವ ಹಂಬಲ ವ್ಯಕ್ತಪಡಿಸಿದಾಗ ಮನೆಯವರು ಬೇಡ ಎಂದರೂ ಕೂಡ ಪ್ರೀತಿಯ ತಾತನ ಮುಖ ನೋಡಲು ತನ್ನ ಬುಲ್ಲೆಟ್‌ನಲ್ಲಿ ಕುಂದಾಪುರಕ್ಕೆ ಹೊರಟು ಬರುತ್ತಿರುವಾಗ ಚಾಮರಾಜನಗರ ತಾಲೋಕಿನ ಪಣ್ಯದಹಂಡಿ ಬಳಿಯ ರಸ್ತೆ ಮಧ್ಯದ ಹಂಪ್ಸ್‌ನ್ನು ಗಮನಿಸದೇ ಅಕಸ್ಮಾತ್ತಾಗಿ ರಸ್ತೆಗೆ ಬಿದ್ದು ಮೃತಪಟ್ಟಿದ್ದರು
ಈ ಬಗ್ಗೆ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕೊನೆಯಲ್ಲಿ ತಾತನೊಂದಿಗೆ ಮೊಮ್ಮಗನ ಅಂತ್ಯಕ್ರೀಯೆಯನ್ನು ಕಂಡ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಕಣ್ಣೀರಿನಿಂದ ಮಮ್ಮಲ ಮರುಗಿದರು

