Home » ಬಿ.ವೈ.ರಾಘವೇಂದ್ರ ಸಂತಾಪ
 

ಬಿ.ವೈ.ರಾಘವೇಂದ್ರ ಸಂತಾಪ

by Kundapur Xpress
Spread the love

ಬೈಂದೂರು : ಯಕ್ಷಗಾನ ಪ್ರಾಕಾರಗಳಲ್ಲಿ ಒಂದಾದ ಬಡಗು ತಿಟ್ಟಿನ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರ ಅವರು ನಿಧನವು ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ತಮ್ಮದೇ ಶೈಲಿಯ ಭಾಗತಿಕೆ ಹಾಗೂ ಮಧುರ ಕಂಠಸಿರಿಯ ಮೂಲಕ ಕಲೆಗೆ ಹೊಸ ಮೆರಗು ನೀಡಿದ್ದರು. ಕಲಾ ಪ್ರತಿಭೆಯ ಮೂಲಕ ನಾಡಿನೂದ್ಧಕ್ಕೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.
4 ದಶಕಗಳಿಗೂ ಅಧಿಕಾಲ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ ಅವರು ಪೆರ್ಡೂರು, ಅಮೃತೇಶ್ವರಿ, ಹಿರೆಮಹಾಲಿಂಗೇಶ್ವರ ಹಾಗೂ ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿ, ಪೌರಾಣಿಕ, ಸಾಮಾಜಿಕ ಪ್ರಸಂಗಗಳಿಗೂ ಜೀವ ತುಂಬಿದ್ದರು.
ಎಂ.ನಾರ್ಣಪ್ಪ ಉಪ್ಪೂರು ಇವರ ಶಿಷ್ಯರಾಗಿ, ಕಾಳಿಂಗ ನಾವಡರ ಒಡನಾಡಿಯಾಗಿ ರಂಗ ಪ್ರವೇಶ ಮಾಡಿದ ಧಾರೇಶ್ವರರು ಭಾಗವತಿಕೆಯ ಮೂಲಕ ಜನಮನ್ನಣೆ ಪಡೆದವರು. ಅವರ ಅಗಲಿಕೆಯಿಂದ ಕುಟುಂಬ ವರ್ಗ ಮತ್ತು ಅಭಿಮಾನಿ ವರ್ಗಕ್ಕೆ ಉಂಟಾದ ನೋವನ್ನು ಸಹಿಸುವ ಶಕ್ತಿ ದೇವರು ನೀಡಲಿ ಮತ್ತು ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

   

Related Articles

error: Content is protected !!