ಕುಂದಾಪುರ : ನ:24 ಕುಂದಾಪುರ ವಿಧಾನಸಭಾ ಕ್ಷೇತ್ರದ ವಿಶೇಷ ಮತದಾರ ಪಟ್ಟಿ ಪರಿಷ್ಕರಣಿ ಅಂಗವಾಗಿ ಬಿ
ಎಲ್ ಎ. ಘಟನಾಯಕರ ಕಾರ್ಯಗಾರ ಕುಂದಾಪುರ ಬಿಜೆಪಿ ಕಾರ್ಯಾಲಯದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಉಪಸ್ಥಿತಿಯಲ್ಲಿ ನೆರವೇರಿ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆಯ ಮಹತ್ವ ಮತ್ತು ಬಿ ಎಲ್ ಎ – 2 ಇವರ ಜೊತೆಗೂಡಿ ಶೀಘ್ರದಲ್ಲಿ ಎಲ್ಲಾ ಬೂತ್ ಮಟ್ಟದಲ್ಲಿ ಸಜ್ಜುಗೊಂಡು ಅವರೊಂದಿಗೆ ಪಕ್ಷದ ಕಾರ್ಯ ವೈಕರಿ ಮಾಡುವ ವಿಚಾರವನ್ನು ಸವಿಸ್ತಾರವಾಗಿ ಕಾರ್ಯಗಾರದಲ್ಲಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಮಂಡಲ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ವಹಿಸಿದರು
ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಕುಂದಾಪುರ ಮಂಡಲ ಬಿ ಎಲ್ ಎ ಇದರ ಸಂಚಾಲಕ ರಾಜೇಶ್ ಶೆಟ್ಟಿ ಶಿರೂರು ಮೂರ್ ಕೈ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ,ಸುಧೀರ್.ಕೆ. ಎಸ್, ಹಾಗೂ ಬಿ ಎಲ್ ಎ ಘಟನಾಯಕರಾದ ಶಂಕರ್ ಅಂಕದಕಟ್ಟೆ, ರೂಪಾ ಬಾಬು ಪೈ ಶ್ರೀಮತಿ ನೇತ್ರಾವತಿ ಸದಾನಂದ ಬಳ್ಕೂರು,ಶರತ್ ಕುಮಾರ್ ಹೆಗ್ಡೆ, ಸುರೇಶ್ ಶೆಟ್ಟಿ ಕಾಡೂರು, ಸುರೇಂದ್ರ ಕಾಂಚನ್ ಸಂಗಮ್, ವಿಠಲ ಪೂಜಾರಿ ಐರೋಡಿ ಉಪಸ್ಥಿತರಿದ್ದರು.

