Home » ಸಂದೀಪ್‌ ವಿ.ಕಿರಣ್‌ ಕುಮಾರ್‌ಗೆ ಸನ್ಮಾನ
 

ಸಂದೀಪ್‌ ವಿ.ಕಿರಣ್‌ ಕುಮಾರ್‌ಗೆ ಸನ್ಮಾನ

by Kundapur Xpress
Spread the love

ಕುಂದಾಪುರ : ಸುಣ್ಣಾರಿಯ  ಎಕ್ಸಲೆಂಟ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಕುಂದಾಪುರ ವಲಯ ಮಟ್ಟದ 10ನೇ ತರಗತಿಯ ಮಕ್ಕಳಿಗಾಗಿ ಆಯೋಜಿಸಿದ ಪ್ರೇರಣಾ ಶಿಬಿರದ ಸಮಾರಂಭದಲ್ಲಿ ಎಕ್ಸಲೆಂಟ್‌ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕರಾಟೆ ತರಭೇತಿ ನೀಡುತ್ತಿರುವ ಸಂದೀಪ್‌ ವಿ.ಕಿರಣ್‌ ಕುಮಾರ್‌ರವರನ್ನು ಸನ್ಮಾನಿಸಲಾಯಿತು

ಎಕ್ಸಲೆಂಟ್‌ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿನಿಯಾದ ನವಮಿ ಎಸ್‌ ಶೆಟ್ಟಿಯವರು ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಎಕ್ಸಲೆಂಟ್‌ ಸಮೂಹ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದು ಅವಳ ತರಭೇತುದಾರರಾದ ಸಂದೀಪ್‌ ಕಿರಣ್‌ ಕುಮಾರ್‌ ರವರ ಪರಿಶ್ರಮವನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಎಕ್ಸಲೆಂಟ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಮಹೇಶ್ ಹೆಗ್ಡೆ ಕೆಪಿಎಸ್ ಸ್ಕೂಲ್ ವೈಸ್ ಪ್ರಿನ್ಸಿಪಾಲ್ ಚಂದ್ರಶೇಖರ ಶೆಟ್ಟಿ, ಲೇಖಕ ಸಿ.ಎ.ಗೋಪಾಲಕೃಷ್ಣ ಭಟ್, ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಯೋಗ ನರಸಿಂಹ ಸ್ವಾಮಿ, ತಾಲೂಕು ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ದುಲ್ ರವೂಫ್, ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್‌ ನಾಗರಾಜ ಶೆಟ್ಟಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಸುಣ್ಣಾರಿ ಎಕ್ಸಲೆಂಟ್ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸರೋಜಿನಿ ಆಚಾರ್ಯ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಉಪಸ್ಥಿತರಿದ್ದರು.

 

Related Articles

error: Content is protected !!