Home ಕರಾವಳಿ ಸುದ್ದಿಕಳೆದು ಹೋದ ಮೊಬೈಲ್ ಪತ್ತೆ

ಕಳೆದು ಹೋದ ಮೊಬೈಲ್ ಪತ್ತೆ

ಸಾರ್ವಜನಿಕರಿಂದ ಶ್ಲಾಘನೆ

by Kundapur Xpress

ಕುಂದಾಪುರ : ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಕಳ್ಳತನದ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿದ್ದು ಕುಂದಾಪುರದ ಹಲವು ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ನ್ನು ಕಳೆದುಕೊಂಡ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಕುಂದಾಪುರ ಪೊಲೀಸರು 20 ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ಹಿಂತಿರುಗಿಸಿದ್ದಾರೆ

ವೃತ್ತ ನಿರೀಕ್ಷಕ ನಂದಕುಮಾರ್‌ ನೇತೃತ್ವದಲ್ಲಿ ಠಾಣಾಧಿಕಾರಿಗಳಾದ ಕೆ ಪ್ರಸಾದ್‌ ಹಾಗೂ ವಿನಯ್‌ ಕೋರ್ಲಹಳ್ಳಿ ಹಾಗೂ ಸಿಬ್ಬಂದಿಯವರು ನಡೆಸಿದ ಕಾರ್ಯಾಚರಣೆಯಲ್ಲಿ ಮೊಬೈಲ್‌ಗಳನ್ನು ವಿವಿಧ ಪ್ರದೇಶಗಳಲ್ಲಿ ವಶಪಡಿಸಿಕೊಂಡು ವಾರೀಸುದಾರರಿಗೆ ಹಿಂತಿರುಗಿಸಿದ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಸಾರ್ವಜನಿಕರು ತಮ್ಮ ಮೊಬೈಲ್‌ ಕಳೆದುಕೊಂಡಲ್ಲಿ ತಕ್ಷಣ ಪೊಲೀಸ್‌ ಠಾಣೆಗೆ ದೂರು ನೀಡಿದರೆ ಮೊಬೈಲ್‌ ವಿವರಗಳನ್ನು ಸಿ ಇ ಐ ಆರ್‌ (C E I R) ಪೋರ್ಟಲ್ ಮೂಲಕ ದಾಖಲಿಸಿ ಪತ್ತೆ ಕಾರ್ಯ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ

 

Related Articles