Home ಕರಾವಳಿ ಸುದ್ದಿಕೋಟೇಶ್ವರ ಪದವಿ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

ಕೋಟೇಶ್ವರ ಪದವಿ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

"Massive blood donation camp at Koteshwara Degree College"

by Kundapur Xpress

ಕೋಟೇಶ್ವರ : ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಕೋಟೇಶ್ವರ ಇಲ್ಲಿ ಸ್ವಯಂ ಪ್ರೇರಿತ ರಕ್ತದಾನ ದಿನದಂದು ಕಾಲೇಜಿನ ಐಕ್ಯೂಎಸಿ, ಯುವ ರೆಡ್ ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಘಟಕ ಕುಂದಾಪುರ, ಲಯನ್ಸ್ ಕ್ಲಬ್ ಕೋಟೇಶ್ವರ ಹಾಗೂ ಲಯನ್ಸ್ ಕ್ಲಬ್ ಕೋಟ ಗಿಳಿಯಾರು ಇವರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಯಕರ ಶೆಟ್ಟಿ, ಅಧ್ಯಕ್ಷರು, ಭಾರತೀಯ ರೆಡ್‌ಕ್ರಾಸ್ ಘಟಕ ಕುಂದಾಪುರ ಇವರು ರಕ್ತದಾನದ ಮಹತ್ವವನ್ನು ಹಾಗೂ ರಕ್ತದಾನ ಮಾಡಿದ ದಾನಿಗಳ ಆರೋಗ್ಯ ವೃದ್ಧಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ವೈದ್ಯ ಎಂ. ಇವರು ಆರೋಗ್ಯವಂತ ವ್ಯಕ್ತಿಗಳು ನಿಯಮಾನುಸಾರ ರಕ್ತದಾನ ಮಾಡುವುದರ ಮೂಲಕ ಸಮಾಜಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಬಹುದೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕರಾದ ಡಾ. ಚೇತನಾ ಎಂ. ಇವರು ರಕ್ತದಾನವೆಂದರೆ ಕೇವಲ ರಕ್ತ ನೀಡುವುದಲ್ಲ, ಅದು ಒಬ್ಬ ಜೀವಿಗೆ ಬದುಕುವ ಅವಕಾಶ ನೀಡುವುದೆಂದು ಹೇಳುವುದರ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಲಯನ್ ಪ್ರೇಮಲತಾ ದಿನಕರ ಕೋಟೇಶ್ವರ, ಲಯನ್ ಸುರೇಶ್ ಕಾರಂತ್ ಕೋಟ ಗಿಳಿಯಾರು, ಸತ್ಯನಾರಾಯಣ ಪುರಾಣಿಕ್, ಶಿವರಾಮ ಶೆಟ್ಟಿ, ಜೆ.ಪಿ. ಶೆಟ್ಟಿ ಕಟ್ಕೆರೆ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ. ಸುಬ್ರಮಣ್ಯ ಎ. ಉಪಸ್ಥಿತರಿದ್ದರು. ತೃತೀಯ ಬಿ.ಬಿ.ಎ. ವಿದ್ಯಾರ್ಥಿ ನಾಗರತ್ನ ಮತ್ತು ತಂಡದವರು ಪ್ರಾರ್ಥಿಸಿದರು. ತೃತೀಯ ಬಿ.ಕಾಂ. ಸುಚೇತಾ ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Leave a Comment

This site uses Akismet to reduce spam. Learn how your comment data is processed.