ಕುಂದಾಪುರ : ರೋಟರಿ ಕ್ಲಬ್ ಕುಂದಾಪುರ ಮತ್ತು ಶ್ರೀ ಅನ್ನಪೂರ್ಣ ಸೇವಾ ಬಂದು ಕುಂದಾಪುರ ಹಾಗೂ ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ಕೆಎಂಸಿ ದಂತ ಮಹಾವಿದ್ಯಾಲಯದ ತಜ್ಞ ವೈದ್ಯರಿಂದ ನಾಳೆ ಕುಂದಾಪುರದ ರೋಟರಿ ಭವನದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ
ಕುಂದಾಪುರದ ಹೊಸ ಬಸ್ ಸ್ಟ್ಯಾಂಡ್ ಸಮೀಪದ ಫೆರ್ರೀ ರಸ್ತೆಯಲ್ಲಿರುವ ಗಿಳಿಯಾರು ಕುಶಾಲ್ ಹೆಗ್ಡೆ ರೋಟರಿ ಭವನದಲ್ಲಿ ನಾಳೆ ಆದಿತ್ಯವಾರ ಬೆಳಿಗ್ಗೆ ಗಂಟೆ 9.00 ರಿಂದ 12.00 ರ ವರೆಗೆ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕುಂದಾಪುರ ರೋಟರಿ ಕ್ಲಬ್ ಪ್ರಕಟಣೆ ತಿಳಿಸಿದೆ