ಅಂಬಲಪಾಡಿ: ಶಿಸ್ತುಬದ್ಧ ಆಹಾರ ಕ್ರಮ, ವ್ಯಾಯಾಮ, ಉಲ್ಲಸಿತ ಮನಸ್ಸಿನ ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಸದೃಢ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ನಿರ್ವಹಣೆಗೆ ಪೂರಕ ಎಂದು ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.
ಅವರು ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಆಶ್ರಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ಸಹಯೋಗದೊಂದಿಗೆ ದಿಶಾ ಸರ್ಜಿಕಲ್ಸ್ ಎಂಡ್ ಲೈಫ್ ಕೇರ್ ಉಡುಪಿ, ಲಯನ್ಸ್ ಕ್ಲಬ್ ಹಿರಿಯಡ್ಕ, ಹೆಚ್ಡಿಎಫ್ಸಿ ಬ್ಯಾಂಕ್ ಮಂಗಳೂರು, ಲಯನ್ಸ್ ಕ್ಲಬ್ ಉಡುಪಿ ಚೇತನಾ, ಲಯನ್ಸ್ ಕ್ಲಬ್ ಉಡುಪಿ ಬನ್ನಂಜೆ, ಬುಡೋಕಾನ್ ಕರಾಟೆ & ಸ್ಪೋರ್ಟ್ಸ್ ಅಸೋಸಿಯೇಶನ್ ಕರ್ನಾಟಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಅಂಬಲಪಾಡಿ ವಲಯ, ಉಜ್ವಲ ಸಂಜೀವಿನಿ ಒಕ್ಕೂಟ ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಂದುಬೆಟ್ಟು, ಎನ್.ಸಿ. ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ.), ಬಂಕೇರ್ಕಟ್ಟ ಅಂಬಲಪಾಡಿ, ಸ್ವಾಮಿ ಫ್ರೆಂಡ್ಸ್ ಆಚಾರಿಗುಂಡಿ ಅಂಬಲಪಾಡಿ ಮತ್ತು ಚಾಂಪಿಯನ್ ಕ್ರಿಕೆಟರ್ಸ್ ಅಂಬಲಪಾಡಿ ಇದರ ಜಂಟಿ ಸಹಭಾಗಿತ್ವದೊಂದಿಗೆ ಬಿಲ್ಲವ ಮಹಿಳಾ ಘಟಕ ಅಂಬಲಪಾಡಿ ಮತ್ತು ಶ್ರೀ ಗುರು ಮಹಿಳಾ ಕುಣಿತ ಭಜನಾ ಮಂಡಳಿ ಅಂಬಲಪಾಡಿ ಇದರ ಸಹಕಾರದೊಂದಿಗೆ ಅಂಬಲಪಾಡಿ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ‘ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ’ ಮತ್ತು ‘ಸ್ವಯಂ ಪ್ರೇರಿತ ರಕ್ತದಾನ ಶಿಬಿರ’ವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು
ಹೆದರಿಕೆ ಮತ್ತು ನಿರ್ಲಕ್ಷ್ಯ ಮನೋಭಾವ ಅರೋಗ್ಯ ಸಂರಕ್ಷಣೆಗೆ ಮಾರಕ. ರಕ್ತದಾನದಿoದ ಜೀವದಾನ ಎಂಬಂತೆ ವಿವಿಧ ಸಮಾಜ ಸೇವಾ ಸಂಘಟನೆಗಳ ಆಶ್ರಯದಲ್ಲಿ ಮಣಿಪಾಲದ ಪ್ರತಿಷ್ಠಿತ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆಯ ಜೊತೆಗೆ ರಕ್ತದಾನ ಶಿಬಿರವನ್ನೂ ಆಯೋಜಿಸಿರುವುದು ಪ್ರಶಂಸನೀಯ. ಹೆಚ್ಚಿನ ದೈಹಿಕ ತ್ರಾಸವಿಲ್ಲದ ಒತ್ತಡದ ಬದುಕಿನ ನಡುವೆ ಎಲ್ಲ ವಯೋಮಾನದ ಜನತೆ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವುದು ಇಂದಿನ ಅಗತ್ಯತೆ ಎಂದು ಅವರು ತಿಳಿಸಿದರು.
ಮುಂಬೈಯಲ್ಲಿ ಮೆಡಿಯರ್ಥ್ ಲೈಫ್ ಕೇರ್ ಸಂಸ್ಥೆಯ ನಿರ್ದೇಶಕರಾಗಿ ನೂರಾರು ಮಂದಿಗೆ ಉದ್ಯೋಗವನ್ನು ನೀಡಿ, ಪ್ರಸಕ್ತ ಉಡುಪಿಯ ದಿಶಾ ಸರ್ಜಿಕಲ್ಸ್ ಎಂಡ್ ಲೈಫ್ ಕೇರ್ ಸಂಸ್ಥೆಯ ಆಡಳಿತ ಪಾಲುದಾರರಾಗಿ ಆರೋಗ್ಯ ಸಂಬಂಧಿತ ಸೇವೆಯ ಜೊತೆಗೆ, ಸಂಘದ ಎಲ್ಲ ಅಭಿವೃದ್ಧಿ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಅಂಬಲಪಾಡಿ ಪಠೇಲರ ಮನೆ ಭರತ್ ಶೆಟ್ಟಿ, ಹಾಗೂ ರಕ್ತದಾನಿಗಳಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಸತತ 60ನೇ ಬಾರಿಗೆ ರಕ್ತದಾನಗೈದ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಇವರನ್ನು ಸಂಘಟಕರ ಪರವಾಗಿ ಡಾ! ನಿ.ಬೀ. ವಿಜಯ ಬಲ್ಲಾಳ್ ಸನ್ಮಾನಿಸಿ, ದಿಶಾ ಸರ್ಜಿಕಲ್ಸ್ ಎಂಡ್ ಲೈಫ್ ಕೇರ್ ಉಡುಪಿ ಇದರ ವತಿಯಿಂದ, ಪಾರ್ಶ್ವವಾಯು ಪೀಡಿತ ವ್ಯಕ್ತಿಯೋರ್ವರಿಗೆ ಗಾಲಿ ಕುರ್ಚಿಯನ್ನು ವಿತರಿಸಿದರು
ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ 150ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ದಿಶಾ ಸರ್ಜಿಕಲ್ಸ್ ಎಂಡ್ ಲೈಫ್ ಕೇರ್ ಉಡುಪಿ ಇದರ ವತಿಯಿಂದ ಫಸ್ಟ್ ಏಡ್ ಕಿಟ್ ಗಳನ್ನು ವಿತರಿಸಲಾಯಿತು. ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಗೌರವಾಧ್ಯಕ್ಷ ಹಾಗೂ ಬಿಲ್ಲವರ ಸಮಾಜ ಸೇವಾ ಸಂಘ(ರಿ.) ಮಲ್ಪೆ ಇದರ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಬ್ಲಡ್ ಸೆಂಟರ್ ಇದರ ಆರೋಗ್ಯಾಧಿಕಾರಿ ಡಾ! ದೀಪ್ ಎಮ್., ತಾಂತ್ರಿಕ ಮೇಲ್ವಿಚಾರಕ ವಿಶ್ವೇಶ್ ಎನ್., ಲಯನ್ಸ್ ಕ್ಲಬ್ ಹಿರಿಯಡ್ಕ ಅಧ್ಯಕ್ಷ ಮೋಹನದಾಸ್ ಆಚಾರ್ಯ, ಹೆಚ್ಡಿಎಫ್ಸಿ ಬ್ಯಾಂಕ್ ಅಧಿಕಾರಿ ಆಕಾಶ್ ಕುಂದರ್, ಲಯನ್ಸ್ ಕ್ಲಬ್ ಉಡುಪಿ-ಚೇತನಾ ಅಧ್ಯಕ್ಷ ಜಗದೀಶ್ ಆಚಾರ್ಯ, ಲಯನ್ಸ್ ಕ್ಲಬ್ ಉಡುಪಿ-ಬನ್ನಂಜೆ ಅಧ್ಯಕ್ಷ ಸದಾನಂದ, ಬುಡೋಕಾನ್ ಕರಾಟೆ & ಸ್ಪೋರ್ಟ್ಸ್ ಎಸೋಸಿಯೇಶನ್ ಕರ್ನಾಟಕ ಅಧ್ಯಕ್ಷ ವಾಮನ್ ಪಾಲನ್, ಉಜ್ವಲ ಸಂಜೀವಿನಿ ಒಕ್ಕೂಟ ಅಂಬಲಪಾಡಿ ಅಧ್ಯಕ್ಷೆ ಸವಿತಾ ಸಂತೋಷ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಂದುಬೆಟ್ಟು ಅಧ್ಯಕ್ಷ ಮಹೇಶ್ ಚಂದ್ರ ರಾವ್, ಎನ್.ಸಿ. ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ.), ಬಂಕೇರ್ಕಟ್ಟ ಅಂಬಲಪಾಡಿ ಅಧ್ಯಕ್ಷ ಕಿರಣ್ ಪೂಜಾರಿ, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಯೋಗೀಶ್ ಶೆಟ್ಟಿ, ಬಿಲ್ಲವ ಸೇವಾ ಸಂಘದ ಮಹಿಳಾ ಘಟಕದ ಸಂಚಾಲಕಿ ಗೋದಾವರಿ ಎಮ್. ಸುವರ್ಣ, ಬನ್ನಂಜೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಸಂಘದ ಆಡಳಿತ ಸಮಿತಿಯ ಉಪಾಧ್ಯಕ್ಷ ಶಿವದಾಸ್ ಪಿ., ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ಅವಿನಾಶ್ ಪೂಜಾರಿ, ಮಾಜಿ ಅಧ್ಯಕ್ಷರಾದ ಕೆ.ಮಂಜಪ್ಪ ಸುವರ್ಣ, ಎ.ಭಾಸ್ಕರ ಪೂಜಾರಿ, ಸಮಿತಿ ಸದಸ್ಯರುಗಳಾದ ಎ.ಮುದ್ದಣ್ಣ ಪೂಜಾರಿ, ರಾಜೇಂದ್ರ ಪಂದುಬೆಟ್ಟು, ಭಾಸ್ಕರ್ ಅಂಚನ್, ಗುರುರಾಜ್, ವಿನಯ್ ಕುಮಾರ್, ನಿತಿನ್ ಕುಮಾರ್, ಮಹಿಳಾ ಘಟಕದ ಸಹ ಸಂಚಾಲಕಿ ದೇವಕಿ ಕೆ. ಕೋಟ್ಯಾನ್, ಕಾರ್ಯದರ್ಶಿ ವಾಣಿಶ್ರೀ ಅರುಣ್, ಜತೆ ಕಾರ್ಯದರ್ಶಿಗಳಾದ ಅಶ್ವಿನಿ, ಲಾವಣ್ಯ, ಪ್ರಮುಖರಾದ ಮೋಹನ್ ಶೆಟ್ಟಿ, ರಮೇಶ್ ಕೋಟ್ಯಾನ್, ಕುಶಲ್ ಕುಮಾರ್ ಎ., ರವಿ ಪಾಲನ್, ಶಂಕರ ಪೂಜಾರಿ, ಜಯ ಸನಿಲ್, ಗೋಪಾಲಕೃಷ್ಣ ಶೆಟ್ಟಿ, ರಮೇಶ್ ಮಲ್ಪೆ ಹಾಗೂ ಸಂಘದ ಮತ್ತು ಮಹಿಳಾ ಘಟಕದ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.