52
ಕಾಪು : ವಿಧಾನಸಭಾ ಕ್ಷೇತ್ರದ ಕಟಪಾಡಿ – ಶಿರ್ವ ಮುಖ್ಯ ರಸ್ತೆಯ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 6 ಕೋಟಿ ರೂಪಾಯಿ ಅನುದಾನ ಮಂಜೂರಾಗಿ ಭಾಗಶಃ ಕಾಮಗಾರಿ ಪೂರ್ಣಗೊಂಡಿದ್ದು ಮುಂದುವರಿದ ಪಂಜಿಮಾರ್ ಬಳಿಯ ರಸ್ತೆ ಡಾಂಬರೀಕರಣ ನಡೆಯುತ್ತಿದ್ದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಕಾಮಗಾರಿಯ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಕುಲಾರ್, ಪ್ರವೀಣ್ ಪೂಜಾರಿ, ಸಹಾಯಕ ಅಭಿಯಂತರಾದ ಪ್ರಸನ್ನ, ಶಕ್ತಿ ಕೇಂದ್ರದ ಸಂತೋಷ್ ಶೆಟ್ಟಿ, ಸ್ಥಳೀಯರು ವಿರೇಂದ್ರ ಪಾಟ್ಕರ್, ಲಕ್ಷ್ಮಣ್ ನಾಯಕ್, ದಿನಕರ್ ಶೆಟ್ಟಿ, ಲೋಹಿತ್ ಭಟ್, ಶೇಖರ್ ಕುಲಾಲ್ ಉಪಸ್ಥಿತರಿದ್ದರು.

