Home »  ಸಿ ಎ, ಸಿ ಎಸ್ ಫೌಂಡೇಶನ್ ಕೋರ್ಸಿನ ಉದ್ಘಾಟ
 

 ಸಿ ಎ, ಸಿ ಎಸ್ ಫೌಂಡೇಶನ್ ಕೋರ್ಸಿನ ಉದ್ಘಾಟ

by Kundapur Xpress
Spread the love

ಕುಂದಾಪುರ : ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಸಿ ಎ,ಸಿ ಎಸ್ ಫೌಂಡೇಶನ್ ಕೋರ್ಸಿನ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೆ.ವಿ.ಸಿ ಸಂಸ್ಥೆಯ ಸಿ.ಎ. ದೀಪಿಕಾ ವಸನಿ ರವರು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ವೃತ್ತಿಪರತೆಗಾಗಿ ಸಿ ಎ, ಸಿ ಎಸ್ ಫೌಂಡೇಶನ್ ಕೋರ್ಸ ನ್ನು ಉದ್ಘಾಟಿಸಿದರು

ಅವರು  ಮಾತನಾಡಿ ನಮ್ಮ ಬದುಕಿನಲ್ಲಿ ನಾವು ಸ್ವಾವಲಂಬಿಯಾಗಿರುವುದಕ್ಕೆ ಹೆಚ್ಚು ಗಮನ ಕೊಡಬೇಕು. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಾದರೆ ನಾವು ವಿಶೇಷ ಕೌಶಲ್ಯಗಳನ್ನು ಹೊಂದಿರಬೇಕು. ಸಿ ಎ, ಸಿ ಎಸ್ ಕೋರ್ಸಿನಿಂದ ಔದ್ಯೋಗಿಕ ಹಾಗೂ ವೈಯಕ್ತಿಕವಾಗಿಯೂ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಪ್ರಾಂಶುಪಾಲರಾದ ಡಾ. ರೂಪಾ ಶಣೈರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸ್ವತಂತ್ರವಾಗಿ ಉತ್ತಮ ಜೀವನ ನಿರ್ವಹಣೆಗೆ ಇಂತಹ ತರಬೇತಿಗಳು ಪ್ರಸ್ತುತದಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುವ ಕಾರಣದಿಂದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಲೆಕ್ಕಶಾಸ್ತ್ರ ಉಪನ್ಯಾಸಕ ಶ್ರೀ ಪ್ರಶಾಂತರವರು ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕಿ ರಶ್ಮಿಕಾರವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪವಿತ್ರ ಶೆಟ್ಟಿ ವಂದಿಸಿದರು.

 

Related Articles

error: Content is protected !!