ಹಾಲಾಡಿ:ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಯು ಬಹುಮುಖ್ಯವಾಗಿರುವಂತಹದು. ಕರ್ನಾಟಕ ಸರ್ಕಾರ ಶಾಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ. ತಾಲೂಕು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳಾಡಿ ಹರ್ಕಾಡಿ ಇವರ ಆಶ್ರಯದಲ್ಲಿ ವಲಯ ಮಟ್ಟದ 14ರ ವಯೋಮಾನದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ ಪ್ರತಿಯೊಂದು ಕ್ರೀಡೆಯಲ್ಲಿಯೂ ಸೋಲು ಗೆಲುವಿನೊಂದಿಗೆ ಭಾಗವಹಿಸುವಿಕೆಯೂ ಅತಿ ಮುಖ್ಯವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡು ಉನ್ನತ ಪ್ರದರ್ಶನವನ್ನು ನೀಡಿ ಜೀವನದಲ್ಲಿ ಯಶಸ್ಸು ಕಾಣುವಂತಾಗಬೇಕೆಂದು ಹಳ್ಳಾಡಿ ಒಲಂಪಿಕ್ಸ್ 2025 ಕ್ರೀಡಾಕೂಟಕ್ಕೆ ಮತ್ತು ಭಾಗವಹಿಸುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಚಂದ್ರ ಭಂಡಾರಿ ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳಾಡಿ- ಹರ್ಕಾಡಿ, ಶ್ರೀಮತಿ ಸುಕನ್ಯಾ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ, ಜಯರಾಜ್ ಶೆಟ್ಟಿ ಶಿರಿಯಾರ ಅಧ್ಯಕ್ಷರು ಹಳೆ ವಿದ್ಯಾರ್ಥಿಗಳ ಸಂಘ, ಸಂತೋಷ್ ಅಧ್ಯಕ್ಷರು ನಂದಿಕೇಶ್ವರ ಯುವಕ ಮಂಡಲ,ಶೇಖರ್ ಶಿಕ್ಷಣ ಸಂಯೋಜಕರು ಹಾಲಾಡಿ ವೃತ್ತ, ನಾಗರಾಜ್ ಆಚಾರ್ಯ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಸಮೂಹ ಸಂಪನ್ಮೂಲ ಕೇಂದ್ರ ಬಿದ್ಕಲ್ ಕಟ್ಟೆ, ಶ್ರೀಮತಿ ಶೋಭಾವತಿ ಮುಖ್ಯೋಪಾಧ್ಯಾಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳಾಡಿ- ಹರ್ಕಾಡಿ, ಶ್ರೀಮತಿ ರಾಜೀವಿ ಗ್ರಾಮ ಪಂಚಾಯತ್ ಸದಸ್ಯರು ಹಾರ್ದಳ್ಳಿ ಮಂಡಳ್ಳಿ,ಕಿಶನ್ ರಾಜ್ ಅಧ್ಯಕ್ಷರು ಉಡುಪಿ ಜಿಲ್ಲಾ ದೈಹಿಕ ಶಿಕ್ಷಕರು ಸಂಘ ಗ್ರೇಡ್ – 2, ಬಾಲಕೃಷ್ಣ ಅಧ್ಯಕ್ಷರು ದೈಹಿಕ ಶಿಕ್ಷಕರ ಸಂಘ ಕುಂದಾಪುರ, ಉದ್ಭವ ಶೆಟ್ಟಿ ಹಳೆ ವಿದ್ಯಾರ್ಥಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳಾಡಿ- ಹರ್ಕಾಡಿ,,ಉದಯ್ ಮಡಿವಾಳ ಅಧ್ಯಕ್ಷರು ಪ್ರೌಢಶಾಲಾ ದೈಹಿಕ ಶಿಕ್ಷಕರು ಗ್ರೇಡ್ -1 ಹಾಗೂ ಶಾಲಾ ಅಧ್ಯಾಪಕವಂದದವರು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಗ್ರಾಮ ಪಂಚಾಯಿತಿನ ಸದಸ್ಯರು, ಊರಿನ ನಾಗರಿಕರು, ಶಾಲಾ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಇನ್ನಿತರರು ಉಪಸ್ಥಿತರಿದ್ದರು.

