ಮಂದಾರ್ತಿ: ಸಾರ್ವಜನಿಕ ಶಾರದೋತ್ಸವ ಸಮಿತಿ ಬಿಲ್ಲಾಡಿ ಹಾಗೂ ಬಿಲ್ಲಾಡಿ ಪ್ರೆಂಡ್ಸ್ ಯುವ ವೇದಿಕೆ ನೇತ್ರತ್ವದಲ್ಲಿ ಸಪ್ಟೆಂಬರ್ 27,28 ರಂದು ನಡೆಯುವ ಭಕ್ತಿ ಭಾವ ಬಣ್ಣಗಳ ವೈಭವ ಬಿಲ್ಲಾಡಿ -ದಸರಾ -2025 ಕಾರ್ಯಕ್ರಮದ ಅಂಗವಾಗಿ ಸಂಘಟಕರು ಇಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರ ಸ್ವಗ್ರಹಕ್ಕೆ ತೆರಳಿ ಕಾರ್ಯಕ್ರಮದ ಆಹ್ವಾನದ ಪತ್ರಿಕೆ ಬಿಲ್ಲಾಡಿ ದಸರಾ 2025ರ ಅಧಿಕೃತ ಲಾಂಛನವನ್ನು ಶಾಸಕರು ಬಿಡುಗಡೆ ಗೊಳಿಸಿ ಮಾತನಾಡಿದ ಅವರು ಸುಮಾರು 9 ವರ್ಷಗಳಿಂದ ಬಿಲ್ಲಾಡಿಯಲ್ಲಿ ಯುವಕ -ಯುವತಿಯರು ಊರಿನ ಹಿರಿಯೊಂದಿಗೆ ವಿಜ್ರಂಭಣೆಯಿಂದ ನಡೆಸಿಕೊಂಡು ಬರುತ್ತಿರುವ ಬಿಲ್ಲಾಡಿ-ದಸರಾ ಊರ ಹಬ್ಬವಾಗಿ ವೈಭಯುತವಾಗಿ ನಡೆಯಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಲ್ಲಾಡಿ ದಸರಾ ಸ್ಥಾಪಕ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ದಸರಾ 2025 ರ ಅಧ್ಯಕ್ಷ ಚಂದ್ರಕಾಂತ ಕೊಠಾರಿ ,ಯುವ ಉದ್ಯಮಿ ಪ್ರಿಯದರ್ಶಿನ್ ಶೆಟ್ಟಿ ಬಿಲ್ಲಾಡಿ, ರಾಘವ್ ಮೆಂಡನ್ ಬಿಲ್ಲಾಡಿ ಬಿಲ್ಲಾಡಿ ಫ್ರೆಂಡ್ಸ್ ಅಧ್ಯಕ್ಷ, ಪ್ರತಾಪ್ ಶೆಟ್ಟಿ ಅರಾಡಿ ಉಪಸ್ಥಿತರಿದ್ದರು.

