ಹಾಸನ : ಕಾಗ್ರೇಸಿನ ಒಡೆದಾಳುವ ರಾಜಕಾರಣದ ಭಾಗವಾಗಿಯೇ ಹನುಮಧ್ವಜ ವಿರುಧ್ದ ರಾಷ್ಟ್ರಧ್ವಜ ಎತ್ತಿ ಕಟ್ಟಿದರು ಎಂದು ಮಾಜಿ ಸಚಿವ ಸಿ ಟಿ ರವಿ ವಾಗ್ದಾಳಿ ನಡೆಸಿದರು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮಂಡ್ಯವನ್ನು ಮಂಗಳೂರು ಮಾಡಲು ಆಗಲ್ಲ ಎಂಬ ಚೆಲುವರಾಯ ಸ್ವಾಮಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಧ್ವಜ ಸರ್ವಮಾನ್ಯ ಅದು ಎತ್ತರಕ್ಕಿಂತ ಎತ್ತದಲ್ಲಿರಬೇಕು. ಹನುಮಧ್ವಜ ತೆಗೆದು ರಾಷ್ಟ್ರ ಧ್ವಜ ಹಾರಿಸುವ ಅಗತ್ಯವೇನಿತ್ತು, ಇನ್ನೊಂದು ಧ್ವಜಸ್ತಂಭವನ್ನು ನೆಟ್ಟು ಹನುಮಧ್ವಜಕ್ಕಿಂತ ಎತ್ತರದಲ್ಲಿ ಹಾರಿಸಬೇಕಿತ್ತು, ಮಂಡ್ಯವನ್ನು ಯಾರೂ ಮಂಗಳೂರು ಮಾಡಲು ಹೊರಟಿಲ್ಲ, ಮಂಡ್ಯ ಇಂಡಿಯಾದೊಳಗೆ ಇದೆಯೇ ಹೊರತು ಪಾಕಿಸ್ತಾನದೊಳಗಿಲ್ಲ ಎನ್ನುವುದನ್ನು ಅವರು ನೆನಪಿಟ್ಟುಕೊಳ್ಳಲಿ. ಈ ರಾಜ್ಯದಲ್ಲಿ ಯಾವ ರಾಜಕಾರಣ ನಡೆಯುತ್ತದೆ ಎನ್ನುವುದನ್ನು ಅಂತ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಮಂಡ್ಯದಲ್ಲಿರುವ ಹನುಮ ಭಕ್ತರು ಯಾರಿಗೂ ತಲೆ ತಗ್ಗಿಸಲಾರರು. ತಲೆ ಎತ್ತಿಕೊಂಡು ಓಡಾಡುವವರು. ಹನುಮನಿಗೋಸ್ಕರ ಜೀವ ಕೊಡಲು ತಯಾರಾಗಿರುವವರು. ಮಂಡ್ಯವನ್ನು ಇನ್ನೇನೋ ಮಾಡುತ್ತೇವೆ ಎಂದು ಹೊರಡಬೇಡಿ. ಮುಂದಿನ ಪರಿಣಾಮಗಳೇನು ಎಂಬುದನ್ನು ಅಲ್ಲಿನ ಜನರೇ ಮುಂದಿನ ದಿನಗಳಲ್ಲಿ ನಿಮಗೆ ತೋರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು