ಕುಂದಾಪುರ : ವಿವೇಕಾನಂದರ ತತ್ವ ಮತ್ತು ಆದರ್ಶ ಕೇವಲ ಭಾರತಕ್ಕೆ ಅಲ್ಲ ಇಡೀ ವಿಶ್ವಕ್ಕೆ ಮಾದರಿ. ಯುವ ಪೀಳಿಗೆಯು ಅವರು ಬೋಧಿಸಿದ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸತ್ಯದ ಹಾದಿಯಲ್ಲಿ ಸಾಗತ್ತಾ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಗೆಲುವಿಗಾಗಿ ಯಾವುದೇ ಅಡ್ಡ ಮಾರ್ಗ ಹಿಡಿಯದೆ ಆದರ್ಶ ವ್ಯಕ್ತಿತ್ವವನ್ನು ಮೈಗುಡಿಸಿಕೊಂಡು ಸದೃಢ ದೇಶವನ್ನು ಕಟ್ಟುವ ನೆಲೆಯಲ್ಲಿ ಸಿದ್ದರಾಗಬೇಕು ಎಂದು ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರದ ಭಂಡಾರ್ ಕಾರ್ಸ ಕಾಲೇಜಿನ ನಿವೃತ್ತ ಪ್ರಾಂಶುಪಾಲಾರದ ಡಾ I ಏನ್. ಪಿ. ನಾರಾಯಣ ಶೆಟ್ಟಿ ನುಡಿದರು . ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ನಾವು ಸ್ಪರ್ಧಾಯುಗದಲ್ಲಿ ಇದ್ದೇವೆ. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು. ವಿವೇಕಾನಂದರ ಆದರ್ಶದಂತೆ ಸತ್ಯತೆಯಿಂದ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕು ಎಂದರು .ಐ ಎಮ್. ಜೆ. ಐ. ಎಸ್. ಸಿ ಯಂಗ್ ಲೀಡರ್ ಅವಾರ್ಡ್–2024ರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ವಿಜೇತರಾದ ಎಲ್ಲರನ್ನು ಅಭಿನಂದಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲರದ ಪ್ರೊ ಜಯಶೀಲ ಕುಮಾರ್ ರವರು ಸ್ಪರ್ಧೆಯ ವಿವರವನ್ನು ನೀಡುತ್ತಾ ಆಯ್ಕೆಯ ಹಂತ ಮತ್ತು ಮಾನದಂಡವನ್ನು ವಿವರಿಸಿದರು ಎಂದರು. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಆಯ್ದ 22 ಕಾಲೇಜಿನಲ್ಲಿ ನಡೆದ ಎರಡು ಹಂತದ ಸ್ಪರ್ಧೆಯಲ್ಲಿ 200 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಅಂತಿಮ ಸ್ಪರ್ಧೆಯಲ್ಲಿ 15 ಕಾಲೇಜಿನ 45 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ ಎಂದರು
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾI ರಾಮಕೃಷ್ಣ ಹೆಗ್ಡೆ ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಸ್ಪರ್ಧೆಯ ಮೂಲ ಉದ್ದೇಶ ಮತ್ತು ನಾಯಕತ್ವವನ್ನು ವಿದ್ಯಾರ್ಥಿ ಜೀವನದಲ್ಲಿ ಗುರುತಿಸುವುದು ತುಂಬಾ ಮುಖ್ಯ ಮತ್ತು ಅದರ ಪ್ರಾಮುಖ್ಯತೆ ಅವರ ಔದ್ಯೋಗಿಕ ನೆಲೆಯಲ್ಲಿ ಎಷ್ಟು ಪರಿಣಾಮಕಾರಿಯಾಗಬಲ್ಲದು ಎನ್ನುದನ್ನು ವಿವರಿಸಿದರು. ಈ ನಿಟ್ಟಿನಲ್ಲಿ ಸಂಸ್ಥೆಯು ಮುಂದಿನ ವರ್ಷವೂ ಈ ಸ್ಪರ್ಧೆಯನ್ನು ಇನ್ನಷ್ಟು ಮೌಲ್ಯಯುತವಾಗಿ ಹಮ್ಮಿಕೊಳ್ಳುತ್ತದೆ ಎಂದರು
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆಯವರಾದ ಡಾ. ಪ್ರತಿಭಾ ಎಂ ಪಟೇಲ್ ರವರು, ತೀರ್ಪುಗಾರರಾದ ಶ್ರೀಯುತ ಅಕ್ಷಯ್ ಹೆಗ್ಡೆ, ರಾಷ್ಟ್ರ ಪ್ರಶಸ್ತಿ ವಿಜೇತ ನಿರೂಪಕರು, ಪ್ರೊ ಅಮೃತಮಾಲ ಡೀನ್ ಆಫ್ ಇಂಡಸ್ಟ್ರಿಯಲ್ ರಿಲೇಶನ್ಸ್ ಆಫ್ ಪ್ಲೇಸ್ಮೆಂಟ್. ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ. ಡಾ.ನಿಖಿಲಾ ಪೈ, BSH ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕರು, ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿಯವರಾದ ಪ್ರೊಫೆಸರ್ ಸುಮನರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರೊಫೆಸರ್ ಪಾವನ ಅತಿಥಿಗಳನ್ನು ಪರಿಚಯಿಸಿ ಪ್ರೊಫೆಸರ್ ಸ್ವರ್ಣ ರಾಣಿಯವರು ವಂದಿಸಿ ವಿದ್ಯಾರ್ಥಿನಿ ಚೇತನ ಪ್ರಾರ್ಥನೆಗೈದರು