ನಮ್ಮ ದೇಶದ ಸ್ವಾತಂತ್ರ್ಯದ 77ನೆಯ ಸ್ವಾತಂತ್ರ್ಯ ಮಹೋತ್ಸವವನ್ನು ನಾವು ಈ ವರ್ಷ ಆಚರಿಸಿಕೊಳ್ಳುತ್ತಿದ್ದೇವೆ. ಭಾರತದ ತ್ರಿವರ್ಣ ಧ್ವಜದ ಸ್ಟೇಟಸ್ ಎಲ್ಲರ ಮೊಬೈಲುಗಳನ್ನು ರಾರಾಜಿಸಲು ಆರಂಭವಾಗಿದೆ. ಪ್ರತಿಯೊಬ್ಬರ ಮನೆಯ ಮೇಲೆ ರಾಷ್ಟ್ರೀಯ ಧ್ವಜ ಹಾರಲು ಶುರುವಾಗಿದೆ. ನಮ್ಮ ಇತಿಹಾಸದ ಹಿಂದಿನ ಪುಟಗಳನ್ನು ತೆರೆದಾಗ ಭಾರತ ಪುರಾತನ ಸಮಯದಲ್ಲಿ ಅತ್ಯಂತ ಶ್ರೇಷ್ಠ ಮತ್ತು ಸಂಪತ್ಭರಿತ ರಾಷ್ಟ್ರವಾಗಿತ್ತು ಎಂದು ನಾವು ಹೇಳುವುದನ್ನು ಕೇಳುತ್ತೇವೆ. ಭಾರತ ಬ್ರಿಟಿಷರ ಆಡಳಿತಕ್ಕೆ ಒಳಪಡಲು ಕಾರಣವಾದವರು ಯಾರು ? ಬ್ರಿಟಿಷರು ಭಾರತವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾದರೂ ಹೇಗೆ ? ಇದಕ್ಕೆ ಉತ್ತರ ಬಹಳ ಸುಲಭ ,ನಮ್ಮ ದೇಶದ ಒಳಗಿದ್ದವರೇ ಬ್ರಿಟಿಷರ ಜೊತೆಗೆ ಸೇರಿ ಸಂಪೂರ್ಣ ಭಾರತವನ್ನು
ಬ್ರಿಟಿಷರು ಆಳುವಂತೆ ಮಾಡಿದರು ಅಲ್ಲವೇ? ಬ್ರಿಟಿಷರು ಭಾರತವನ್ನು ಆಳುವುದಕ್ಕೆ ಕಂಡುಕೊಂಡಂತಹ ಉಪಾಯ ಜನರ ಒಗ್ಗಟ್ಟನ್ನು ಒಡೆದು ಅವರನ್ನು ಆಳುವಂತಹ ಉಪಾಯ. ನಾವು ಭಾರತವನ್ನು ಬ್ರಿಟಿಷರು ಕೈಗೆ ಕೊಟ್ಟು ಆಮೇಲೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮತ್ತೆ ಸ್ವಾತಂತ್ರ ಪಡೆದೆವು. ಸ್ವಾತಂತ್ರ್ಯ ನಂತರ ಕೂಡ ಭಾರತದಲ್ಲಿ ಆದಂತಹ ದಂಗೆಗಳು ಸಾವು ನೋವುಗಳು ಅಪಾರ . ಸ್ವಾತಂತ್ರ್ಯಕ್ಕಿಂತ ಮೊದಲು ಸ್ವಾತಂತ್ರ್ಯ ಹೋರಾಟಗಾರರು ನಮ್ಮ ದೇಶವನ್ನು ಉಳಿಸಿದರು. ಸ್ವಾತಂತ್ರ್ಯ ಪಡೆದ ನಂತರ ದೇಶ ಕಾಯುವ ಸೈನಿಕರು ಭಾರತ ಮಾತೆಯನ್ನು ಉಳಿಸಿದರು. ಒಟ್ಟಾರೆಯಾಗಿ ನೋಡುವುದಾದರೆ ಈ ನಮ್ಮ ದೇಶಕ್ಕೆ ಗಂಡಾಂತರ ಬರುವ ಸಮಸ್ಯೆಗೆ ಮೂಲ ನಮ್ಮಲ್ಲಿ ಇಲ್ಲದಿರುವಂತಹ ಐಕ್ಯತೆ, ನಮ್ಮಲ್ಲಿ ಮೂಡದಿರುವಂತಹ ಭಾವೈಕ್ಯತೆ ನಮ್ಮ ದೇಶದಲ್ಲಿ ಇದ್ದುಕೊಂಡೆ ಇತರರಿಗೆ ಸಹಾಯ ಮಾಡುವ ದೇಶದ್ರೋಹಿ ಮನೋಭಾವದಿಂದ. ಸ್ವಾತಂತ್ರ್ಯದ ಮುಂಚೆಯ ನಮ್ಮ ದೇಶದ ಸಮಸ್ಯೆಗೆ ಮೂಲ ಕಾರಣ ನಾವೇ. ಸ್ವಾತಂತ್ರ ನಂತರವೂ ಕೂಡ ನಮ್ಮ ಸಮಸ್ಯೆಗಳಿಗೆ ಕಾರಣವು ನಾವೇ. ಭಾರತವು ವಿಶ್ವಗುರು ಆಗುವ ಹಾದಿಯತ್ತ ದಾಪುಗಾಲು ಹಾಕುತ್ತಾ ಇದೆ. ಇನ್ನು ಮುಂದೆ ಬರುವ ಸಮಸ್ಯೆಗಳಿಗೂ ಕೂಡ ಕಾರಣವೂ ನಾವೇ. ಪ್ರತಿಯೊಬ್ಬರ ಮನೆಯ ಮೇಲೆಯೂ ಕೂಡ ತ್ರಿವರ್ಣ ಧ್ವಜ , ಪ್ರತಿಯೊಬ್ಬರ ಹೃದಯದಲ್ಲಿಯೂ ಕೂಡ ತ್ರಿವರ್ಣ ಧ್ವಜ ಇದ್ದರೆ ಮಾತ್ರ ನಮ್ಮ ದೇಶದ ಐಕ್ಯತೆ ಭಾವೈಕ್ಯತೆ ರೂಪುಗೊಳ್ಳಲು ಸಾಧ್ಯ ಜಾತಿ ,ಮತ ,ಭೇದ ಇವುಗಳೆಲ್ಲದಿಂದ ಹೊರಬಂದು ವಿಶ್ವಮಾನವ ಸಂದೇಶದಿಂದ ಒಂದಾದರೆ ಮಾತ್ರ ದೇಶದ ಭದ್ರತೆಆಂತರಿಕವಾಗಿ ಬಲಗೊಳ್ಳುತ್ತದೆ ಮತ್ತು ದೃಢಗೊಳ್ಳುತ್ತದೆ. ದೇಶದ ಐಕ್ಯತೆ, ಆರ್ಥಿಕತೆ ಭಾವೈಕ್ಯತೆ ಬಲವಾಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಮತ್ತು ನಿಜವಾದ ಸ್ವಾತಂತ್ರ್ಯದ ವ್ಯಾಖ್ಯಾನಕ್ಕೆ ಒಂದು ಪರಿಪೂರ್ಣ ಅರ್ಥ ಸಿಗುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನು ದೇಶಭಕ್ತಿಯಲ್ಲಿ ಸಿಪಾಯಿ ಆದಾಗ ಮಾತ್ ದೇಶದ ಭದ್ರತೆ ಸಾಧ್ಯ
ಪ್ರದೀಪ್ ಚಿನ್ಮಯಿ ಆಸ್ಪತ್ರೆ