117
ಕೋಟ : ಜೀವನ್ ಮಿತ್ರ ಸೇವಾ ಟ್ರಸ್ಟ್ ಕೋಟ 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಿವರಾಮ ಕಾರಂತ್ ಥೀಮ್ ಪಾರ್ಕ್ನಲ್ಲಿರುವ ಕಲ್ಮಾಡಿ ಅಂಗನವಾಡಿ ಮುದ್ದು ಮಕ್ಕಳೊಂದಿಗೆ ಸಂಭ್ರಮಿಸಿಕೊಂಡರು.
ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಅಗತ್ಯ ಇರುವ ಕಿಟ್‌ನ್ನು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹಸ್ತಾಂತರಿಸಿ ಮಕ್ಕಳಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಶ್ಯಾಮ್ ಸುಂದರ್ ನಾಯರಿ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಹಂದಟ್ಟು, ಚಂದ್ರಶೇಖರ್ ಮೆಂಡನ್ ,ಜಯಕರ್ನಾಟಕ ಸತೀಶ್ ಪೂಜಾರಿ ಸಾಲಿಗ್ರಾಮ, ಕೋಡಿ ಪಂಚಾತಯತ್ ಸದಸ್ಯ ಕೃಷ್ಣ ಪೂಜಾರಿ, ಕೋಟ ಗ್ರಾಮ ಪಂಚಾಯತ್ ಸದಸ್ಯ ಪ್ರದೀಪ್ ಪಡುಕೆರೆ, ಜೀವನ್ ಮಿತ್ರ ಟ್ರಸ್ಟ್ನ ವಸಂತ್ ಸುವರ್ಣ ಕೋಟ, ಗೋಪಾಲ್ ಕೃಷ್ಣ ಕುಂಬಾಷಿ, ಧನುಷ್ ವಡ್ಡರ್ಸಿ, ಜೀವನ್ ಕದ್ರಿಕಟ್,ಕಿಶೋರ್ ಶೆಟ್ಟಿ ಚಿತ್ರಪಾಡಿ,ಜಗನಾಥ್ ಅಮೀನ್ ಸಾಲಿಗ್ರಾಮ,ಶ್ರೀನಿವಾಸ್ ಅಮೀನ್ ಪಡುಕೆರೆ,ಜಯಲಕ್ಷ್ಮೀ ಅಂಗನವಾಡಿ ಸಹಾಯಕಿ, ಶೈಲಜಾ ಕೋಟ,ನಾಗೇಂದ್ರ ಪುತ್ರನ್ ಕೋಟ ,ನಾಗರಾಜ್ ಪುತ್ರನ್ ಕೋಟ ಉಪಸ್ಥಿತರಿದ್ದರು.

