ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಅಡಿಯಲ್ಲಿ ಪಾಂಡೇಶ್ವರ ವಲಯದ ,ಸಾಸ್ತಾನ ಕಾರ್ಯಕ್ಷೇತ್ರದ ವಿದ್ಯೋದಯ ಶಾಲೆಯಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮವನ್ನು ಮನೋ ಶಾಸ್ತ್ರಜ್ಞರಾದ ಡಾ. ಜಯಶ್ರೀ ಭಟ್ ನವಣೆ ದೋಸೆ ಮಾಡುವುದರ ಮೂಲಕ ಉದ್ಘಾಟಿಸಿ ,ಪೌಷ್ಟಿಕ ಆಹಾರ ಹಾಗೂ ಸಾಂಪ್ರದಾಯಿಕ ಅಡುಗೆಗಳ ಬಗ್ಗೆ ತಿಳಿಸಿ ಆಹಾರವನ್ನು ಹಿತವಾಗಿ, ಮಿತವಾಗಿ ಬಳಸಬೇಕು. ಆಹಾರದಿಂದ ಆರೋಗ್ಯ ,ಆಹಾರವೇ ಔಷಧಿ ಆಗಬೇಕು ಎಂದರಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಒಂದು ಹೆಮ್ಮೆಯ ವಿಷಯ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯಡಬೆಟ್ಟು ವಿದ್ಯೋದಯ ಶಾಲೆಯ ಮುಖ್ಯೋಪಾಧ್ಯಾಯನಿ ಇಂದಿರಾ, ವಲಯದ ಅಧ್ಯಲ್ಷೆ ರಾಧಾ, ಸಾಸ್ತಾನ ಒಕ್ಕೂಟದ ಅಧ್ಯಕ್ಷೆ ಗಂಗಾವತಿ ರಾವ್, ವಿಪತ್ತು ಘಟಕದ ಸದಸ್ಯರಾದ ರೇಣುಕಾ,ಪಾಂಡೇಶ್ವರ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷೆ ಕಲ್ಪನಾ ದಿನಕರ್,ತಾಲೂಕು ವಿಚಕ್ಷಣಾಧಿಕಾರಿ ಅಶೋಕ್, ತಾಲೂಕು ಸಮನ್ವಯ ಅಧಿಕಾರಿ ಪುಷ್ಪಲತಾ, ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮಿ, ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶೋಭಾ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯದ ಅಡುಗೆಗಳ ಪ್ರಾತ್ಯಕ್ಷಿಕೆ ಜೊತೆಗೆ ಪ್ರದರ್ಶನ ಮಾಡಲಾಯಿತು .ಮತ್ತು ಕಾರ್ಯಕ್ರಮದಲ್ಲಿ ಧರ್ಮಸ್ಥಳದಿಂದ, ಪೂಜ್ಯರು ಮತ್ತು ಅಮ್ಮನವರು ಮಂಜೂರು ಮಾಡಿದ ಸುಜ್ಞಾನ ನಿಧಿ ಮಂಜೂರಾತಿ ಪತ್ರವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು ಹಾಗೂ ಪಿಆರ್‍ಕೆ ಕ್ಲೈಮ್ ಬಂದ , ಸದಸ್ಯರಿಗೆ ಬ್ಯಾಂಕ್ ಪಾಸ್ ಪುಸ್ತಕ ಎಂಟ್ರಿ ಮಾಡಿ ಅಮೌಂಟ್ ಬಗ್ಗೆ ತಿಳಿಸಲಾಯಿತು.