Home » ಕುಂದಾಪುರ ವಕೀಲರ ಸಂಘದಿಂದ ಸಂತಾಪ
 

ಕುಂದಾಪುರ ವಕೀಲರ ಸಂಘದಿಂದ ಸಂತಾಪ

by Kundapur Xpress
Spread the love

ನ್ಯಾಯವಾದಿ ಜಯಪ್ರಕಾಶ್ ಸಾಲಿನ್ಸ್ ರವರಿಗೆ ಕುಂದಾಪುರ ವಕೀಲರ ಸಂಘದಿಂದ ಸಂತಾಪ

ಕುಂದಾಪುರ : ವಕೀಲರ ಸಂಘದ ಮಾಜಿ ಉಪಾಧ್ಯಕ್ಷರು ಹಾಗೂ ವಕೀಲರ ಸಂಘದ ಸದಸ್ಯರು ಆಗಿರುವ ಜಯಪ್ರಕಾಶ್ ಸಾಲಿನ್ಸ್ ರವರ ಆಕಸ್ಮಿಕ ನಿಧನಕ್ಕೆ ಕುಂದಾಪುರ ವಕೀಲರ ಸಂಘ (ರಿ.) ವು  ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಜಯಪ್ರಕಾಶ್ ಸಾಲಿನ್ಸ್ ರವರನ್ನು ಎಲ್ಲ ವಕೀಲರು “ಜೆ.ಪಿ” ಎಂದೇ ಪ್ರೀತಿಯಿಂದ ಕರೆಯುತ್ತಿದ್ದು ಎಲ್ಲ ವಕೀಲರೊಂದಿಗೆ ಆತ್ಮೀಯತೆಯಿಂದಿದ್ದು ನ್ಯಾಯಾಧೀಶರೊಂದಿಗೂ ಕೂಡ ಆತ್ಮೀಯತೆಯಿಂದಿದ್ದರು  ತನ್ನ ಸೀನಿಯರ್ ರವಿಕಿರಣ್ ಮುರ್ಡೇಶ್ವರ್ ರವರ ಮೇಲಿನ ಪ್ರೀತಿಯಿಂದ ಸ್ವಂತ ಕಛೇರಿಯನ್ನು ಆರಂಭಿಸದೆ ಮೊನ್ನೆಯ ತನಕ ಸಹಾಯಕರಾಗಿಯೇ ಉಳಿದು ತನ್ನ ಸೀನಿಯರ್ ಮೇಲೆ ಅವರು ಇಟ್ಟಿರುವ ಪ್ರೀತಿಗೆ ಗೌರವಕ್ಕೆ ಪಾತ್ರರಾಗಿದ್ದರು. ಜೆ.ಪಿ ಇಂದು ನಮ್ಮೊಂದಿಗೆ ಇಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ ಹಾಗೂ ಜೆ.ಪಿ ಯವರ ಅಕಾಲಿಕ ಮರಣ ಕುಂದಾಪುರ ವಕೀಲರ ಸಂಘಕ್ಕೆ ತುಂಬಲಾರದ ನಷ್ಟವಾಗಿದ್ದು ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ  ಬಾಂಧವರಿಗೆ ಹಾಗೂ ಕುಂದಾಪುರದ ಎಲ್ಲ ವಕೀಲರಿಗೆ ಶ್ರೀ ದೇವರು ಕರುಣಿಸಲಿ ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ್ ಹೆಗ್ಡೆಯವರು ಹಾರೈಸಿದರು.

ಕುಂದಾಪುರದ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜು ಎನ್ ಮತ್ತು ಗೌರವಾನ್ವಿತ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಧನೇಶ್ ಮುಗಳಿ ಜಯಪ್ರಕಾಶ್ ಸಾಲಿನ್ಸ್ ರವರ ಗುಣಗಾನ ಮಾಡಿದರು.

“ನನ್ನಲ್ಲಿ ಸುಮಾರು 28 ವರ್ಷಗಳ ಕಾಲ ಸಹಾಯಕ ವಕೀಲರಾಗಿ ಕರ್ತವ್ಯ ನಿರ್ವಹಿಸಿದ ಜೆ.ಪಿ ಯವರು ಪ್ರಾಮಾಣಿಕತೆ, ನಂಬಿಕೆ ಮತ್ತು ಕಠಿಣ ಪರಿಶ್ರಮಕ್ಕೆ ಒಂದು ಉದಾಹರಣೆಯಾಗಿದ್ದು, ಅವರು ತನ್ನ ಸೇವಾ ಅವಧಿಯಲ್ಲಿ ಕೇವಲ 2 ದಿನ ಮಾತ್ರ ರಜೆಯನ್ನು ಮಾಡಿದ್ದು, ನನಗೆ ಅತ್ಯಂತ ನಿಷ್ಟರಾಗಿ ವಿಧೇಯರಾಗಿದ್ದರು” ಎಂದು ಭಾವುಕರಾಗಿ ಹಿರಿಯ ವಕೀಲರಾದ ರವಿಕಿರಣ್ ಮುರ್ಡೇಶ್ವರ್ ರವರು ಹೇಳಿದರು.

ಕುಂದಾಪುರ ವಕೀಲರ ಸಂಘದ ಹಿರಿಯ ವಕೀಲರಾದ ಟಿ.ಬಿ ಶೆಟ್ಟಿ, ಕಾಳಾವರ ಉದಯ್,    ವೈ ಶರತ್ ಶೆಟ್ಟಿ, ಕುಸುಮಾಕರ ಶೆಟ್ಟಿ, ಮುರುಳೀಧರ ಶೆಟ್ಟಿ ಮತ್ತು ಎನ್.ಜೆ. ಸೆಬಾಸ್ಟಿನ್ ರವರು ಮಾತನಾಡಿ ಅಗಲಿದ ಜಯಪ್ರಕಾಶ್ ಸಾಲಿನ್ಸ್ ರವರಿಗೆ ಸಂತಾಪ ವ್ಯಕ್ತಪಡಿಸಿದರು. ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಬೀನಾ ಜೊಸೇಫ್, ಜೊತೆ ಕಾರ್ಯದರ್ಶಿ  ರಿತೇಶ್ ಬಿ ಹಾಗೂ ಕೋಶಾಧಿಕಾರಿ ಹಾಲಾಡಿ ದಿನಕರ್ ಕುಲಾಲ್ ರವರು ಉಪಸ್ಥಿತರಿದ್ದರು.  ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ ಶ್ರೀನಾಥ್ ರಾವ್ ರವರು ಕಾರ್ಯಕ್ರಮ ನಿರ್ವಹಿಸಿದರು. ವಕೀಲರ ಸಂಘದ ಎಲ್ಲ ಸದಸ್ಯರು ಸೇರಿ ಮೌನ ಪ್ರಾರ್ಥನೆ ಮಾಡುವುದರೊಂದಿಗೆ ನುಡಿನಮನ ಸಲ್ಲಿಸಿ ಮೃತ ಜೆ.ಪಿ ಯವರ ಆತ್ಮಕ್ಕೆ ಚಿರಶಾಂತಿ ಕೋರಿ ಎಲ್ಲಾ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದರು.

   

Related Articles

error: Content is protected !!