Home ಶಿಕ್ಷಣರೋಟರಿ ಕ್ಲಬ್‌ ವತಿಯಿಂದ ಪುಸ್ತಕ ವಿತರಣೆ

ರೋಟರಿ ಕ್ಲಬ್‌ ವತಿಯಿಂದ ಪುಸ್ತಕ ವಿತರಣೆ

by Kundapur Xpress

ಕುಂದಾಪುರ : ರೋಟರಿ ಕ್ಲಬ್‌ ಕುಂದಾಪುರದ ವತಿಯಿಂದ ಬಸ್ರೂರು ಶ್ರೀ ಶಾರದ ಕಾಲೇಜಿಗೆ ಲೇಖಕಿ  ಹಾಗೂ ಸಾಹಿತಿಯಾದ ಪಾರ್ವತಿ ಜಿ.ಐತಾಳ್‌ ಅವರು 20 ಸಾವಿರ ಮೌಲ್ಯದ ಪುಸ್ತಕಗಳನ್ನು ಶ್ರೀ ಶಾರದ ಕಾಲೇಜಿನ ಪ್ರಾಂಶುಪಾಲೆಯಾದ  ಡಾ.ಚಂದಾವತಿ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು

ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ ಅಧ್ಯಕ್ಷರಾದ ವೆಂಕಟೇಶ್‌ ನಾವುಂದ ಪುಸ್ತಕ ಅಭಿರುಚಿಯ ಬಗ್ಗೆ ಮಾತನಾಡಿದರು ರೋಟರಿ ಕ್ಲಬ್‌ ಪ್ರಾಜೆಕ್ಟ್‌ ಚೇರ್ಮನ್‌ ಮುತ್ತಯ್ಯ ಶೆಟ್ಟಿ ಅವರು ಪುಸ್ತಕದ ಮಹತ್ವ ತಿಳಿಸಿದರು ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕಾಲೇಜಿನ ಪ್ರಾಂಶುಪಾಲೆ ಡಾ.ಚಂದ್ರಾವತಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು ಸಂದೀಪ್‌ ಕೆ.ಸ್ವಾಗತಿಸಿ ವಂದಿಸಿದರು

Related Articles