ಕುಂದಾಪುರ : ಬೇಳೂರಿಗೆ ಆಗಮಿಸಿದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ. ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ ಮಾತನಾಡಿದರು ಕೇಂದ್ರ ಸರ್ಕಾರದ 70ಕ್ಕೂ ಮಿಕ್ಕಿ ಯೋಜನೆಗಳು ಜನಸಾಮಾನ್ಯರಿಗೆ ತಲುಪುವ ನಿಟ್ಟಿನಲ್ಲಿ, ಹಾಗೆ ಯಾವ ಯೋಜನೆ ಜನಸಾಮಾನ್ಯರಿಗೆ ತಲುಪಲಿಲ್ಲ ಆ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯಕ್ರಮವಾಗಿದ್ದು ಅಧಿಕಾರಿಗಳ ಮೂಲಕ ಪ್ರತಿ ಗ್ರಾಮ ಪಂಚಾಯಿತಿನಲ್ಲಿ ಈ ವಿಕಸಿತ ಭಾರತ ಸಂಕಲ್ಪ ಅಭಿಯಾನ ಉದ್ದೇಶ ಎಂದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡಿದರು, 2024ರ ನರೇಂದ್ರ ಮೋದಿಜಿಯವರ ಕ್ಯಾಲೆಂಡರ್ ಬಿಡುಗಡೆ ಮತ್ತು ಪ್ರತಿಜ್ಞ ವಿಧಿಯನ್ನು ಬೋಧಿಸಲಾಯಿತು ವಿಕಸಿತ ಭಾರತದ ರಥಯಾತ್ರೆಯಲ್ಲಿ ನೇರ ಪ್ರಸಾರವನ್ನು ಶಾಸಕರು ಗ್ರಾಮಸ್ಥರ ಜೊತೆಗೆ ವೀಕ್ಷಿಸಿದರು.ಕೃಷಿಗೆ ಸಂಬಂಧಪಟ್ಟಂತ ಡ್ರೋನ್ ಪ್ರಾತ್ಯಕ್ಷಿಕೆ ನಡೆಯಿತು
ಸಮಾರಂಭದಲ್ಲಿ ಬೇಳೂರು ಗ್ರಾಮ ಪಂಚಾಯತ ಅಧ್ಯಕ್ಷರಾದ ಜಯಶೀಲ ಶೆಟ್ಟಿ,, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಉಷಾ ಕೊಠಾರಿ, ಬೇಳೂರು ಕೆನರಾ ಬ್ಯಾಂಕಿನ ಮ್ಯಾನೇಜರ್ ಶ್ವೇತಾ,, ಜಯಪ್ರಕಾಶ್ ಕೆ ವಿ ಕೆ ಸೈಂಟಿಸ್ಟ್., ಮೀರಾ ಜಿ ಸೀನಿಯರ್ ಎಫ್.ಎಲ್.ಸಿ. ಉಡುಪಿ, ಸುಜನ್ ಮಾಲ ಆರೋಗ್ಯ ಮಿತ್ರ ಅಧಿಕಾರಿ, ಮಹೇಂದ್ರ U.S. ಅಂಚೆ ಮೇಲ್ವಿಚಾರಕರು ಹಾಗೂ ಬೇಳೂರು ಗ್ರಾಮ ಪಂಚಾಯಿತನ ಸದಸ್ಯರು ಉಪಸ್ಥಿತರಿದ್ದರು