ಉಡುಪಿ : ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಾಂಗ್ರೆಸ್ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದು, ಈ ಬಗ್ಗೆ ತನಿಖೆ ಮಾಡಿಸಿ,ಇಲ್ಲವೇ ಆರೋಪ ಒಪ್ಪಿಕೊಂಡು ಕುರ್ಚಿ ಬಿಡಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ
ಸಿದ್ದರಾಮಯ್ಯ ಮತ್ತು ಡಿಕೆಶಿ ಬಿಜೆಪಿ ಸರ್ಕಾರದ ಮೇಲೆ ಪೇಸಿಎಂ ಎಂದೆಲ್ಲ ಆರೋಪ ಮಾಡಿದ್ದರು. 40 ಪರ್ಸೆಂಟ್ ಸರ್ಕಾರ ಎಂದು ಬೋರ್ಡ್ ಹಾಕಿದ್ದರು. ಯಾವ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಹೇಳಿಕೆಯನ್ನು ಆಧರಿಸಿ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದೀರೋ ಅದೇ ಕೆಂಪಣ್ಣ ಈಗ ನಿಮ್ಮ ಮೇಲೂ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಸಾರ್ವತ್ರಿಕವಾಗಿ ರೋಷಾವೇಶದಿಂದ 40 ಪರ್ಸೆಂಟ್ ಗೂ ಹೆಚ್ಚು ಕಮಿಷನ್ ಕೇಳುತ್ತಾರೆ ಎಂದಿದ್ದಾರೆ, ಈಗ ತನಿಖೆ ಮಾಡ್ತಿರೋ ರಾಜೀನಾಮೆ ಕೊಡ್ತೀರೋ ನಿರ್ಧರಿಸಿ ಎಂದು ಹೇಳಿದರು