Home ಕರಾವಳಿ ಸುದ್ದಿಮೂವರು ಅನರ್ಘ್ಯ ರತ್ನಗಳು

ಮೂವರು ಅನರ್ಘ್ಯ ರತ್ನಗಳು

by Kundapur Xpress

ಹೊಸದಿಲ್ಲಿ: ದೇಶದ ಮೂವರು ಮಹಾನ್‌ ಸಾಧಕರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದೇಶದ ಪರಮೋಚ್ಚ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಪ್ರಕಟಿಸಿದ್ದಾರೆ ತನ್ಮೂಲಕ ಒಂದೇ ವರ್ಷದಲ್ಲಿ ಐವರು ಗಣ್ಯರಿಗೆ ಈ ಗೌರವವನ್ನು ಘೋಷಿಸುವ ಮೂಲಕ ದಾಖಲೆ ಬರೆದಂತಾಗಿದೆ ಪಕ್ಷಾತೀತವಾಗಿ ಅತ್ಯುನ್ನತ ನಾಗರಿಕ ಗೌರವವನ್ನು ಘೋಷಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ   

 ಮಾಜಿ ಪ್ರಧಾನಿಗಳಾದ ಪಿ.ವಿ ನರಸಿಂಹ ರಾವ್ ಮತ್ತು ಚೌಧರಿ ಚರಣ್ ಸಿಂಗ್ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ.ಎಂ.ಎಸ್. ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನವನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.

Related Articles