Home » ಯುವ ಸಮೂಹವೇ ಕನ್ನಡದ ರಾಯಭಾರಿಗಳು
 

ಯುವ ಸಮೂಹವೇ ಕನ್ನಡದ ರಾಯಭಾರಿಗಳು

- ಶ್ರೀ ರಾಮರಾಯ ಆಚಾರ್ಯ

by Kundapur Xpress
Spread the love

ಕೋಟೇಶ್ವರ : ಶತ ಶತಮಾನಗಳಿಂದಲೂ ಕನ್ನಡ ಭಾಷೆಯ ಮೇಲೆ ಪರಭಾಷೆಗಳು ಪ್ರಭಾವ ಬೀರುತ್ತಿವೆ. ಆದರೂ ಕನ್ನಡದ ಹಿರಿ ಕಿರಿಯ ಚೇತನಗಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ಇಂದಿನ ವಿದ್ಯಾರ್ಥಿ ಸಮೂಹವೇ ಕನ್ನಡದ ರಾಯಭಾರಿಗಳಾಗಿ ಚೈತನ್ಯದ ಚಿಲುಮೆಗಳಾಗಿ ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಪ್ರಭಾರ ಪ್ರಾಂಶುಪಾಲ ರಾಮರಾಯ ಆಚಾರ್ಯ ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದ ಮಾರ್ಗದರ್ಶನದಲ್ಲಿ ಕನ್ನಡ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಹಯೋಗದಲ್ಲಿ ನಡೆದ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತ ಹೇಳಿದರು. ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ನಾಗರಾಜ ಯು ಮಾತನಾಡಿ ಕನ್ನಡ ಭಾಷೆಯ ಅಸ್ಮಿತೆ ಇರುವುದೇ ಭಾಷೆಯ ಬಳಕೆಯಲ್ಲಿ. ಕನ್ನಡವನ್ನು ಪ್ರೀತಿಸಿ ಅಂತೆಯೇ ಇತರ ಭಾಷೆಯನ್ನು ಗೌರವಿಸಿ ಸೌಹಾರ್ದತೆಯಿಂದ ಮುನ್ನಡೆಯಬೇಕೆಂದು ತಿಳಿ ಹೇಳಿದರು.

ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿಗಳಾದ ಸಂತೋಷ ನಾಯ್ಕ ಹೆಚ್. ಶ್ರೀಮತಿ ಸುಚಿತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೇಯಾ ಮತ್ತು ತಂಡ ಪ್ರಾರ್ಥಿಸಿದರು. ಕನ್ನಡ ಸಹ ಪ್ರಾಧ್ಯಾಪಕರಾದ ನಾಗರಾಜ ವೈದ್ಯ ಎಂ. ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ತೃತೀಯ ಬಿ.ಬಿ.ಎ. ನ ಪ್ರತಿಮಾ ಕಾರ್ಯಕ್ರಮ ನಿರೂಪಿಸಿ ತೃತೀಯ ಬಿ.ಕಾಂ.ನ ಮೇಘನಾ ವಂದಿಸಿದರು. ನಂತರ ಕನ್ನಡ ನಾಡಗೀತೆ ಗುಂಪು ಗಾಯನ ಸ್ಪರ್ಧೆ ನಡೆಯಿತು.

   

Related Articles

error: Content is protected !!