96
ಕುಂದಾಪುರ: ಇತ್ತೀಚೆಗೆ ಉಡುಪಿಯಲ್ಲಿ ಉಡುಪಿ ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಕರ್ನಾಟಕ ಇವರು ನಡೆಸಿದ ೨೨ನೇ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ – ೨೦೨೫ ರಲ್ಲಿ ಕೆ.ಡಿ.ಎಫ್. ಕರಾಟೆ ಕುಂದಾಪುರ ಇದರ ವಿದ್ಯಾರ್ಥಿ ಅಕ್ಷ್ ಎಸ್. ಕುಂದಾಪುರ ಕುಮಿಟೆ ಮತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ. ಈತನಿಗೆ ಏಷ್ಯನ್ ಕರಾಟೆ ಹಾಗೂ ಕರಾಟೆ ಬುಡೋಕಾನ್ ಇಂಡಿಯಾ ಮುಖ್ಯ ತರಬೇತುದಾರರಾದ ಶ್ರೀ ಪರಮೇಶರವರು ಟ್ರೋಫಿ, ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಿರುತ್ತಾರೆ. ಇವನಿಗೆ ಕಿರಣ್ಸ್ ಡ್ರಾಗನ್ ಫಿಸ್ಟ್ ಮಾರ್ಷಲ್ ಆರ್ಟ್ಸ್ನ ಅಧ್ಯಕ್ಷರಾದ ಕಿರಣ್ ಕುಂದಾಪುರ ಹಾಗೂ ಸಂದೀಪ ವಿ. ಕಿರಣ್ ತರಬೇತಿ ನೀಡಿರುತ್ತಾರೆ. ಕುಂದಾಪುರದ ಎಚ್.ಎಂ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಓದುತ್ತಿರುವ ಈತ ಶ್ರೀಮತಿ ರೇಣುಕಾ ಮತ್ತು ಶ್ರೀ ಸಂದೀಪ ವಿ. ಕಿರಣ್ ದಂಪತಿಗಳ ಪುತ್ರನಾಗಿರುತ್ತಾನೆ.

