ಕುಂದಾಪುರ : ಕುಂದಾಪುರ ನಗರದ ಸಾಯಿ ಸೆಂಟರ್ ನ ಎರಡನೇ ಮಹಡಿಯಲ್ಲಿ ಕದಂಬ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 10ನೇ ಶಾಖೆಯು ಉದ್ಘಾಟನೆಗೊಂಡಿತು ನೂತನ ಶಾಖೆಯನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು
ಸಮಾರಂಭದಲ್ಲಿ ಕದಂಬ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷರಾದ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ರೂಪಾ ಅನಂತ್ ಕುಮಾರ್ ಹೆಗಡೆ ಉಪಾಧ್ಯಕ್ಷ ಕೃಷ್ಣ ಎಸಳೇ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನಾಗರಾಜ್ ಜಿ ಎಂ ಗಣಪತಿ ಭಟ್ ಹಾಗೂ ಶಾಖಾ ವ್ಯವಸ್ಥಾಪಕರಾದ ಗಣೇಶ್ ಎಂ ಮಹೇಶ್ ಭಟ್ ಮತ್ತು ಮೋಹನ್ ಹೆಗಡೆ ಉಪಸ್ಥಿತರಿದ್ದರು
ನೂತನ ಶಾಖಾ ಕಚೇರಿಯ ಉದ್ಘಾಟನಾ ಸಮಾರಂಭಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕುಂದಾಪುರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಕುಂದಾಪುರ ಪುರಸಭಾ ಅಧ್ಯಕ್ಷರಾದ ಮೋಹನ್ ಶೆಣೈ ಸತ್ಯಜಿತ್ ಸುರತ್ಕಲ್ ಧನಂಜಯ್ ಮುಂತಾದವರು ಆಗಮಿಸಿ ಶುಭ ಕೋರಿದರು
ಕರ್ಕುಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಬಾಂಡ್ಯ ಸುಧಾಕರ ಶೆಟ್ಟಿ ಮಿತ್ರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಯು. ಆರ್ ಎಸ್ ಎಸ್ ಪ್ರಮುಖರಾದ ಸುಬ್ರಹ್ಮಣ್ಯ ಹೊಳ್ಳ ಡಾ. ಶ್ರೀನಿವಾಸ್ ಪಡಿಯಾರ್ ಅರುಣಾ ಪಡಿಯಾರ್ (ಅರುಣಕ್ಕ) ಮುಂತಾದವರು ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು


