Home ಕರಾವಳಿ ಸುದ್ದಿಕುಂದಾಪುರ : ವಾಲಿಬಾಲ್ ಕೋರ್ಟ್ ವೀಕ್ಷಿಸಿದ ಜಿಲ್ಲಾಧಿಕಾರಿ ಹಾಗೂ ಶಾಸಕರು

ಕುಂದಾಪುರ : ವಾಲಿಬಾಲ್ ಕೋರ್ಟ್ ವೀಕ್ಷಿಸಿದ ಜಿಲ್ಲಾಧಿಕಾರಿ ಹಾಗೂ ಶಾಸಕರು

Kundapur: Deputy Commissioner and MLA Inspect Volleyball Court

by Kundapur Xpress

ಕುಂದಾಪುರ :ಕುಂದಾಪುರದ ಗಾಂಧಿ ಮೈದಾನದಲ್ಲಿ ನೂತನವಾಗಿ ನಿರ್ಮಾಣಗೊಂಡು ಉದ್ಘಾಟನೆಗೊಂಡ ವಾಲಿಬಾಲ್ ಕೋರ್ಟ್ ಅನ್ನು ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ ಹಾಗೂ ಕುಂದಾಪುರ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ವೀಕ್ಷಣೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು, “ಉತ್ತಮ ಗುಣಮಟ್ಟದ ಕೋರ್ಟ್ ನಿರ್ಮಾಣವಾಗಿದೆ. ಇದರ ಸದುಪಯೋಗವನ್ನು ಕ್ರೀಡಾಪಟುಗಳು ಪಡೆದುಕೊಳ್ಳಬೇಕು” ಎಂದರು.

ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಮಾತನಾಡಿ, “ಕುಂದಾಪುರದ ಯುವಕರಲ್ಲಿ ವಾಲಿಬಾಲ್ ಬಗ್ಗೆ ಅಪಾರ ಆಸಕ್ತಿ ಇದೆ. ಈ ಅತ್ಯಾಧುನಿಕ ಕೋರ್ಟ್ ಸ್ಥಳೀಯ ಆಟಗಾರರಿಗೆ ಉತ್ತಮ ವೇದಿಕೆಯಾಗಲಿದೆ” ಎಂದರು.

ಈ ಸಂದರ್ಭದಲ್ಲಿ ವಾಲಿಬಾಲ್ ಮಾಜಿ ಆಟಗಾರ ರಾಜೇಶ್ ಕಾವೇರಿ, ಸುನೀಲ್ ಶೆಟ್ಟಿ ಹೇರಿಕುದ್ರು, ಪುರಸಭಾ ಮಾಜಿ ಸದಸ್ಯ ಸಂತೋಷ್ ಶೆಟ್ಟಿ, ಶಾಸಕರ ಆಪ್ತ ಕಾರ್ಯದರ್ಶಿ ಮಹಿಮ ಶೆಟ್ಟಿ ಕೆ ಮತ್ತು ರೋಷನ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a Comment

This site uses Akismet to reduce spam. Learn how your comment data is processed.