Home ಕರಾವಳಿ ಸುದ್ದಿ25 ವರ್ಷಗಳ ಸಾರ್ಥಕ ಜನಸೇವೆಗೈದ ಪ್ರಧಾನಿ ನರೇಂದ್ರ ಮೋದಿ ಶ್ರೇಯಸ್ಸಿಗೆ ಕಿದಿಯೂರಿನಲ್ಲಿ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆ

25 ವರ್ಷಗಳ ಸಾರ್ಥಕ ಜನಸೇವೆಗೈದ ಪ್ರಧಾನಿ ನರೇಂದ್ರ ಮೋದಿ ಶ್ರೇಯಸ್ಸಿಗೆ ಕಿದಿಯೂರಿನಲ್ಲಿ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆ

Mass Prayer and Special Pooja Offered at Kidiyoor for the Success of PM Narendra Modi, Marking 25 Years of Dedicated Public Service

by Kundapur Xpress

ವಿಶ್ವನಾಯಕ, ಪ್ರಧಾನಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಹುದ್ದೆಯಲ್ಲಿ ಸಾರ್ಥಕ 25 ವರ್ಷಗಳ ಜನಸೇವೆಗೈದಿರುವ ಹಿನ್ನೆಲೆಯಲ್ಲಿ ಅವರ ದೀರ್ಘಾಯುಷ್ಯ, ಯಶಸ್ಸು, ಶ್ರೇಯಸ್ಸಿಗಾಗಿ ಬಿಜೆಪಿ ಮಂಗಳೂರು ವಿಭಾಗ ಎಸ್ಐಆರ್ ಸಂಚಾಲಕ ಕೆ.ಉದಯ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಕಿದಿಯೂರು ಶ್ರೀ ವಿಷ್ಣುಮೂರ್ತಿ ವನದುರ್ಗಾ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ವಿಶೇಷ ಪೂಜೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಅಂಬಲಪಾಡಿ ಅಧ್ಯಕ್ಷ ಗಿರೀಶ್ ಅಮೀನ್ ಕಿದಿಯೂರು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಪಂದುಬೆಟ್ಟು, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸುಂದರ ಪೂಜಾರಿ, ರಾಜೇಶ್ ಸುವರ್ಣ, ನಾಗರಾಜ್ ಕರ್ಕೇರ, ಭಾರತಿ ಭಾಸ್ಕರ್, ಉಷಾ ಶೆಟ್ಟಿ, ದಯಾಶಿನಿ ಪಂದುಬೆಟ್ಟು, ಪ್ರಮುಖರಾದ ಜಗದೀಶ್ ಶೆಟ್ಟಿ, ಶ್ರೇಷ್ಟ್ ಉದಯ ಕುಮಾರ್ ಶೆಟ್ಟಿ, ರಾಮರಾಜ್ ಕಿದಿಯೂರು, ಸುಜಯ್ ಕಿದಿಯೂರು, ಗಣೇಶ್ ಪೂಜಾರಿ, ತುಷಾರ್ ಕುಮಾರ್, ವಿವೇಕ್, ಉದಯ ಸುವರ್ಣ, ಪ್ರಶಾಂತ್, ಯಶಸ್ ಹಾಗೂ ದೇವಸ್ಥಾನದ ಅರ್ಚಕರಾದ ಅರುಣ್ ಭಟ್, ವಾಸುದೇವ ಭಟ್, ರಾಮಚಂದ್ರ ಭಟ್, ವಿಕ್ರಂ ಭಟ್ ಸಹಿತ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Leave a Comment

This site uses Akismet to reduce spam. Learn how your comment data is processed.