Home » ನಾಗರಮಠ – ಮರಳುಗಾರಿಕೆ ಗಣಿ ಇಲಾಖೆ ಸರ್ವೆ : ಗ್ರಾಮಸ್ಥರ ವಿರೋಧ
 

ನಾಗರಮಠ – ಮರಳುಗಾರಿಕೆ ಗಣಿ ಇಲಾಖೆ ಸರ್ವೆ : ಗ್ರಾಮಸ್ಥರ ವಿರೋಧ

by Kundapur Xpress
Spread the love

ಕೋಟ : ಇಲ್ಲಿನ ಬಾರಕೂರು ಗ್ರಾ.ಪಂನ ಹೊಸಾಳ ವ್ಯಾಪ್ತಿಯ ನಾಗರಮಠ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸುವ ಸಲುವಾಗಿ ಗಣಿ ಇಲಾಖೆ ಸರ್ವೆಕಾರ್ಯಕ್ಕೆ ಆಕ್ಷೇಪಿಸಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಗಣಿ ಇಲಾಖೆಯ ಮೇಲಾಧಿಕಾರಿಗಳ ಉಪಸ್ಥಿತಿಯಲ್ಲಿ ಮರಳುಗಾರಿಕೆಯ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಿ ಅದನ್ನು ಬಿಟ್ಟು ಇಂದು ಸರ್ವೇ ಕಾರ್ಯ ನಡೆಸುವುದು ಎಷ್ಟು ಸೂಕ್ತ ಎಂದು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.
ಈ ವೇಳೆ ಬ್ರಹ್ಮಾವರ ಠಾಣೆ ಠಾಣಾಧಿಕಾರಿ ಸುದರ್ಶನ ಮಧ್ಯ ಪ್ರವೇಶಿಸಿ ಗ್ರಾಮಸ್ಥರು ಹಾಗೂ ಗಣಿ ಇಲಾಖೆಯರ ನಡುವೆ ನಡೆಯುತ್ತಿರುವ ವಾಗ್ವಾದವನ್ನು ತಿಳಿಗೊಳಿಸಿ ಇಲಾಖೆ ಕಾನೂನಾತ್ಮಕ ಕಾರ್ಯಗಳಿಗೆ ಅಡ್ಡಿಪಡಿಸದಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಪಂಚಾಯತ್ ಸದಸ್ಯ ಪ್ರವೀಣ್ ಮರಕಾಲ ಬಾರಕೂರು ಗ್ರಾಮಸ್ಥರ ಪರವಾಗಿ ನಮ್ಮೂರಿನ ವಿವಿಧ ಹೊಳೆಗಳಲ್ಲಿರುವ ಮರಳನ್ನು ಕೊಳ್ಳೆ ಹೊಡೆದು ಪರಿಸರಕ್ಕೆ ಧಕ್ಕೆ ತರುತ್ತಿದ್ದಾರೆ,ಇವರಿಗೆ ಮರಳುಗಾರಿಕೆ ನಡೆಸಲು ಈ ಭಾಗವೇ ಅಗತ್ಯವೇ ಇಲ್ಲ ಬದಲಾಗಿ ಇಲ್ಲಿನ ಸಂಪತ್ತನ್ನು ಲೂಟಿ ಹೊಡೆಯಲು ಬಂದಿದ್ದಾರೆ, ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಸಲು ನಾವುಗಳು ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.ಇನ್ನೆರಡು ದಿನಗಳಲ್ಲಿ ಗ್ರಾಮಸ್ಥರ ಸಭೆ ನಡೆಯಲಿದೆ ಅಲ್ಲಿ ಮುಂದಿನ ಹೋರಾಟದ ರೂಪು ರೇಷೆಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಶೋಕ್ ಅಮೀನ್,ಚಂದ್ರ ಕುಂದರ್,ಚAದ್ರ ಅಮೀನ್,ಶೇಖರ್ ಕುಂದರ್,ಡಾನ್ಫ್ ಡಿಲಿಮ್ ಇದ್ದರು.

 

Related Articles

error: Content is protected !!