ಮಂಗಳೂರು:ಕಡು ಬಿಸಿಲಿನ ನಡುವೆಯೂ ಕರಾವಳಿಯಲ್ಲಿ ಚುನಾವಣಾ ಪ್ರಚಾರ ಬಿರುಸು ಪಡೆದಿದೆ ವಿಶ್ವಮಾನ್ಯ ನಾಯಕ ಮೋದಿ ಆಗಮನದಿಂದ ಬಿಜೆಪಿ ಕಾರ್ಯಕರ್ತರ ಹುರುಪು ಮತ್ತಷ್ಟು ಹೆಚ್ಚಾಗಿದ್ದು ಜನಸೇವಕನ ನೋಡಲು ಜನಸಾಗರವೇ ಹರಿದು ಬಂದಿತ್ತು
ಮೂಲ್ಕಿಯಲ್ಲಿ ನಡೆದ ಬಿಜೆಪಿಯ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ 46 ನಿಮಿಷಗಳ ಕಾಲ ಮೋದಿ ನಿರರ್ಗಳ ಮಾತನಾಡಿ ಬಜರಂಗ ದಳ ನಿಷೇಧದ ಕಾಂಗ್ರೇಸ್ ಪ್ರಸ್ತಾಪಕ್ಕೆ ಮೋದಿ ಆಕ್ರೋಶ ವ್ಯಕ್ತಪಡಿಸಿ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ವೇಳೆ ಮತಯಂತ್ರದ ಗುಂಡಿ ಒತ್ತುವಾಗ ಜೈ ಬಜರಂಗ ಬಲಿ ಘೋಷಣೆ ಮೊಳಗಿಸುವಂತೆ ಕರೆ ನೀಡಿದರು ಸಮಾವೇಶದ ಪ್ರಾರಂಭದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿ ಮೋದಿಯವರಿಗೆ ಪೇಟ ತೊಡಿಸಿ ಹಾರ ಹಾಕಿ ಶಾಲು ಹೊದಿಸಿ ಪ್ರಮುಖ ದೇವಸ್ಥಾನಗಳ ಪ್ರಸಾದವನ್ನು ನೀಡಿದರು ಕೇಂದ್ರ ಸಚಿವೆ ಪ್ರಾಸ್ತಾವಿಕ ಮಾತನಾಡಿದರು ದ.ಕ ಮತ್ತು ಉಡುಪಿ ಜಿಲ್ಲೆಯ ಬಿಜೆಪಿಯ 13 ಅಭ್ಯರ್ಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು