ಕೋಟ : ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟದ ವ್ಯಾಪ್ತಿಗೆ ಇಂದು ನಂದಿ ರಥಯಾತ್ರೆಯು ಆಗಮಿಸಿ ಅಮೃತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಗೋ ಅಭಿಮಾನಿಗಳು ಪುಷ್ಪಾರ್ಚನೆ ಸಲ್ಲಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನಂದಿ ರಥದ ಕುಂದಾಪುರ ಸಂಚಾಲಕರಾದ ಶಂಕರ್ ಅಂಕದಕಟ್ಟೆ ಕೋಟತಟ್ಟು ಗ್ರಾಮ ಪಂಚಾಯತಿನ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ , ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ ,ಪಂಚಾಯಿತಿನ ಸದಸ್ಯರಾದ ಜ್ಯೋತಿ ಪೂಜಾರಿ ವಿದ್ಯಾ ಸಾಲಿಯಾನ, ಕೋಟ ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷರು ಆನಂದ್ ದೇವಾಡಿಗ,ಸಮತ ಸುರೇಶ್ ಗಾಣಿಗ, ಜ್ಞಾನೇಶ ಆಚಾರ್,ಕೋಟ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾ ಪೂಜಾರಿ, ಹಾಗೂ ಶ್ರೀನಿವಾಸ್ ಭಂಡಾರಿ, ಭರತ ಗಾಣಿಗ ಹಾಗೂ ಗೋ ಪ್ರೇಮಿಗಳು ಉಪಸ್ಥಿತರಿದ್ದರು.