ಕುಂದಾಪುರ : ಶ್ರೀ ನಾರಾಯಣ ಗುರು ಯುವಕ ಮಂಡಲದ ವತಿಯಿಂದ 47ನೇ ವರ್ಷದ ನವರಾತ್ರಿ ಮಹೋತ್ಸವವನ್ನುಆಚರಿಸಲಾಯಿತು. ದಿನಾಂಕ 9.10. 2024ನೇ ಬುಧವಾರ ಮೂಲ ನಕ್ಷತ್ರದಂದು ಶ್ರೀ ಶಾರದ ದೇವಿಯನ್ನು ಪುರ ಮೆರವಣಿಗೆಯಲ್ಲಿ ತಂದು ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು
ಬೆಳಿಗ್ಗೆ 9:30ಕ್ಕೆ ಪುಣ್ಯಹ, ಗಣಪತಿ ಪೂಜೆ, ಸಂಕಲ್ಪ, ಮಹಾಮಂಗಳಾರತಿ ಹಾಗೂ ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆಯೊಂದಿಗೆ ಪ್ರಸಾದ ವಿತರಣೆ ಆಯಿತು ಸಂಜೆ 5.30ರಿಂದ ಬಿಲ್ಲವ ಮಹಿಳಾ ಮಂಡಲದ ಘಟಕದಿಂದ ಭಜನಾ ಕಾರ್ಯಕ್ರಮ ರಾತ್ರಿ 7:30ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು
ದಿನಾಂಕ 10-10-2024ನೇ ಗುರುವಾರ ಬೆಳಿಗ್ಗೆ 9.30 ರಿಂದ ಚಂಡಿಕಾ ಹೋಮ ನಡೆಯಿತು ಚಂಡಿಕಾ ಹೋಮದ ಪೂಜೆಯಲ್ಲಿ ಸೇವಕರ್ತರಾದ ಶ್ರೀಮತಿ ವಿದ್ಯಾ ಮತ್ತು ಶ್ರೀ ಸಂದೇಶ್ ಪೂಜಾರಿ ಬೀಜಾಡಿ ಇವರು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದರು ಮಧ್ಯಾಹ್ನ 12:30 ಕ್ಕೆ ಅನ್ನಸಂತರ್ಪಣೆ ಜರುಗಿತು