101
ಕುಂದಾಪುರ: ದೆಹಲಿಯ ಪ್ರತಿಷ್ಠಿತ DK Pageant ಸಂಸ್ಥೆಯವರು ಆಯೋಜಿಸುವ “ಪ್ರೈಡ್ ಆಫ್ ಇಂಡಿಯಾ- ಮಿಸ್ ಇಂಡಿಯಾ 2025” ಕಿರೀಟವು ಶ್ರೀ ನೀಧಿ ಕಾರ್ಪೊರೇಷನ್ ಸಂಸ್ಥೆಯ ರಾಜ್ಯ ಪ್ರಶಸ್ತಿ ಪುರಸ್ಕತ ಉಮೇಶ್ ಕುಂದರ್ ಹಾಗೂ ಶ್ರೀಮತಿ ಕುಂದಾಪುರ ಬರೆಕಟ್ಟು ಜಾನಕಿ ಅವರ ಪುತ್ರಿ ನಿಶಾಲಿ ಮುಡಿಗೇರಿದ್ದು ಅತೀವ ಸಂತಸ ತಂದಿದೆ.
ನಿನ್ನೆ ದೆಹಲಿಯ ರ‌್ಯಾಡಿಸನ್ ಬ್ಲೂ ಹೋಟೆಲಿನಲ್ಲಿ ನಡೆದ ಮಿಸ್ ಇಂಡಿಯಾ – ಪ್ರೈಡ್ ಆಫ್ ಇಂಡಿಯಾ 2025 ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಬಂದಿದ್ದ 44 ಸ್ಪರ್ಧಿಗಳನ್ನು ಎದುರಿಸಿ ನಿಶಾಲಿ ಈ ಪ್ರತಿಷ್ಠಿತ ಟೈಟಲ್‌ಗೆ ಕೊರಳೊಡ್ಡುವುದರ ಮೂಲಕ ಸಂಭ್ರಮ ತಂದಿದ್ದಾಳೆ. ಇವರು ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಎಂ.ಎ ಜರ್ನಲಿಸಮ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

