Home » ಕಾಂಗ್ರೆಸ್ ನಿಂದ ಸಮಾಜದ ಶಾಂತಿ ಭಂಗ
 

ಕಾಂಗ್ರೆಸ್ ನಿಂದ ಸಮಾಜದ ಶಾಂತಿ ಭಂಗ

 ವಿ ಸುನಿಲ್ ಕುಮಾರ್ ನಾಮಪತ್ರ ಸಲ್ಲಿಕೆ

by Kundapur Xpress
Spread the love

ವಿ ಸುನಿಲ್ ಕುಮಾರ್ ನಾಮಪತ್ರ ಸಲ್ಲಿಕೆ

ಕಾರ್ಕಳ: ಬಿಜೆಪಿಯಿಂದ ಅಭಿವೃದ್ಧಿ ಕಾರ್ಯಗಳ ಮೂಲಕ ವಿಕಾಸವಾಗುತ್ತಿದ್ದರೆ ಕಾಂಗ್ರೆಸ್ ನಿಂದ ವಿನಾಶವಾಗುತ್ತಿದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಮತಾಂತರ ನಿಷೇಧ ಕಾಯ್ದೆ ವಾಪಾಸು ಪಡೆಯುತ್ತೇವೆ ಎನ್ನುವ ಕಾಂಗ್ರೆಸ್ ಸಮಾಜದ ಶಾಂತಿ ಕೆಡಿಸುತ್ತದೆ ಕಾಂಗ್ರೆಸ್ ಗೆ ಹಾಕುವ ಒಂದೊಂದು ಮತವು ಅಭದ್ರತೆಗೆ ದಾರಿ ಮಾಡಿಕೊಡುತ್ತದೆ ಹಿಂದುಗಳನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡುವುದು ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ ಹೇಳಿದರು ಅವರು ಬುಧವಾರ ಕುಕ್ಕುಂದೂರಿನ ಗ್ರಾಮ ಪಂಚಾಯತ್ ಮೈದಾನದಲ್ಲಿ ನಾಮಪತ್ರ ಸಲ್ಲಿಕೆ ಸಲುವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು

ಉಡುಪಿಯ ಶಾಸಕರಾದ ರಘುಪತಿ ಭಟ್ ಅವರು ಮಾತನಾಡಿ ಅಭಿವೃದ್ಧಿ ಮತ್ತು ಹಿಂದುತ್ವದ ವಿಚಾರದಲ್ಲಿ ಬಿಜೆಪಿ ಗೆಲುವು ಅವಶ್ಯ ಎನ್ನುವುದಕ್ಕಿಂತಲೂ ಅನಿವಾರ್ಯ ಎಂದರು ಸುನಿಲ್ ಕುಮಾರ್ ಅವರು ಕಾರ್ಕಳದ ಅಭಿವೃದ್ಧಿಗಾಗಿ ಮಾಡಿದ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದರು

 ಸುನಿಲ್ ಕುಮಾರ್ ನಾಮ ಪತ್ರಿಕೆ ಸಲ್ಲಿಕೆಯ ಮುನ್ನ ಸ್ವರಾಜ್ ಮೈದಾನದಿಂದ ಕುಕ್ಕೂಂದೂರು ಮೈದಾನದವರೆಗೆ ಮೆರವಣಿಗೆ ಸಾಗಿತು ಸುಡುಬಿಸಿಲನ್ನು ಲೆಕ್ಕಿಸದೆ ಸುನಿಲ್ ಕುಮಾರ್ ಬೆಂಬಲಿಗರು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು ಮೆರವಣಿಗೆಯಲ್ಲಿ ಬಿಜೆಪಿಯ ಪತಾಶೆಗಳು ಹಾರಾಡುತ್ತಿದ್ದು ಕೊಂಬು ಚಂಡೆ ವಾದ್ಯಗಳು ಮೆರವಣಿಗೆಗೆ ಮೆರುಗು ತಂದಿತು

 ವೇದಿಕೆಯಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಕೂಯಿಲಾಡಿ ಸುರೇಶ್ ಶೆಟ್ಟಿ ಕಾರ್ಕಳ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗಡೆ ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ್ ಕಾಮತ್ ಎಂ ಕೆ ವಿಜಯ್ ಕುಮಾರ್ ಗೇರು ನಿಗಮದ ಅಧ್ಯಕ್ಷ ಮುನಿರಾಜ್ ಶೆಟ್ಟಿ, ಚುನಾವಣಾ ಪ್ರಭಾರಿ ಬಾಹುಬಲಿ ಪ್ರಸಾದ್ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ರಾಜ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು ನರಸಿಂಹ ನಾಯಕ್‌ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಜ್ಯೋತಿ ರಮೇಶ್‌ ಪ್ರಾರ್ಥಿಸಿ ರವೀಂದ್ರ ಕುಮಾರ್‌ ಸ್ವಾಗತಿಸಿ ಕರಣಾಕರ ಕೋಟ್ಯಾನ್‌ ಧನ್ಯವಾದವಿತ್ತರು

   

Related Articles

error: Content is protected !!