ಕುಂದಾಪುರ: ಮಂಗಳೂರು ಕಡೆಯಿಂದ ಗೋವಾ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ನಿಂದ ಆಯಿಲ್ ಮಾದರಿ ವಸ್ತು ಸೋರಿಕೆಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ಸ್ಕಿಡ್ ಬಿದ್ದ ಘಟನೆ ನಡೆದಿದೆ
ಕುಂದಾಪುರದ ಕುಂಭಾಶಿಯಿಂದ ಪ್ರಾರಂಭಗೊಂಡು ಹೆಮ್ಮಾಡಿ ತನಕ ಹೆದ್ದಾರಿಯಲ್ಲಿ ಆಯಿಲ್ ಚೆಲ್ಲಿದ್ದು ಬೆಳಿಗ್ಗೆ ಸಣ್ಣ ಪ್ರಮಾಣದ ಮಳೆ ಬಂದ ಕಾರಣ ಮಳೆ ನೀರಿನೊಂದಿಗೆ ಆಯಿಲ್ ಮಿಶ್ರಣಗೊಂಡು ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನ ಸವಾರರು ಬೀಳುವಂತಾಗಿದ್ದಲ್ಲದೆ ಕಾರು ಮೊದಲಾದ ವಾಹನಗಳ ಬ್ರೇಕ್ ಹಿಡಿಯದೆ ಸಣ್ಣ ಪುಟ್ಟ ಅವಘಡಗಳು ನಡೆದಿದೆ
ಈ ಘಟನೆಯಲ್ಲಿ 15 ರಿಂದ 20 ಬೈಕ್ ಸವಾರರು ಬಿದ್ದಿದ್ದು ಇಬ್ಬರು ಸವಾರರು ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ ಇಬ್ಬರು ಬೈಕ್ ಸವಾರರಲ್ಲಿ ಒಬ್ಬರ ಕೈ ಮೂಳೆ ಮುರಿದರೆ ಮತ್ತೊಬ್ಬ ಸವಾರ ಬೈಕಿನಿಂದ ಬಿದ್ದ ಪರಿಣಾಮ ಕಾಲಿನ ಮೂಳೆ ಮುರಿದಿದೆ
ಘಟನೆ ಬೆಳಕಿಗೆ ಬರುತ್ತಲೆ ಎಚ್ಚೆತ್ತುಕೊಂಡ ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಉಡುಪಿ-ಬೈಂದೂರು ಮಾರ್ಗದ ಒಂದು ಕಡೆ ರಸ್ತೆಯನ್ನು ಬಂದ್ ಮಾಡುವ ಮೂಲಕ ಏಕಮುಖ ಸಂಚಾರಕ್ಕೆ ಅನುವು ಮಾಡಿ ಕೊಟ್ಟು ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ