ಕೋಟ: ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಂಘ ಇದರ ಆಶ್ರಯದಲ್ಲಿ 17ನೇ ಸುತ್ತಿನ ಜಂತು ಹುಳು ನಿವಾರಣಾ ಮಾತ್ರೆ ವಿತರಣಾ ಸಮಾರಂಭ ಇತ್ತೀಚಿಗೆ ಸಂಘದ ವಠಾರದಲ್ಲಿ ಜರಗಿತು. ಸಾಸ್ತಾನ ಕ್ಯಾಂಪನ ಒಕ್ಕೂಟದ ವೈದ್ಯರಾದ ಡಾ. ನಿಜಾಮ್ ಪಟೇಲ್ ಹೈನುಗಾರಿಕೆ ಮತ್ತು ಅದರ ನಿರ್ವಹಣೆ ಇದರ ಬಗ್ಗೆ ಮಾಹಿತಿ ನೀಡಿದರು
ನಂತರ ಸದಸ್ಯರ ಸಾಮಾನ್ಯ ಸಭೆ ಶ್ರೀ ಸದ್ಯೋಜಾತ ಮಾನಸ ಮಂದಿರ ಕೋಟತಟ್ಟು ಪಡುಕರೆ ಇಲ್ಲಿ ನಡೆಯಿತು. ಸಂಘದ ಸಿಇಓ ವೀಣಾ ರವರು ಸ್ವಾಗತಿಸಿ 2023-24ನೇ ಸಾಲಿನ ವರದಿ ಮಂಡಿಸಿದರು. ವಿಸ್ತರ್ಣಾಧಿಕಾರಿ ಸರಸ್ವತಿ ಒಕ್ಕೂಟದಿಂದ ಸಂಘದ ಸದಸ್ಯರಿಗೆ ಸಿಗುವ ಸೌಲಭ್ಯದ ಬಗ್ಗೆ ವಿವರವಾದ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಿವಮೂರ್ತಿ.ಕೆ ವಹಿಸಿ ಸದಸ್ಯರಲ್ಲಿ ಉತ್ತಮ ಗುಣಮಟ್ಟದ ಹಾಲನ್ನು ನೀಡಿ ಹಾಗೂ ಸಂಘದ ಅಭಿವೃದ್ಧಿಗೊಳಿಸಿ ಉಳಿಸಿ ಬೆಳಸೋಣ ಎ0ದು ಸದಸ್ಯರಲ್ಲಿ ವಿನಂತಿಸಿ ಕೊಂಡರು
ದ.ಕ. ಹಾಲು ಒಕ್ಕೂಟ ಇದರ ನಿದೇರ್ಶಕ ಕಮಲಾಕ್ಷ ಹೆಬ್ಬಾರ್ ,ಓಕ್ಕೂಟದ ವಿಸ್ತರಣಾ ಅಧಿಕಾರಿ ಸರಸ್ವತಿ , ಸಂಘದ ಸಿಇಓ ವೀಣಾ ಹಾಲು ಪರೀಕ್ಷಕಿ ಮಮತಾ ಐತಾಳ್ ಉಪಸ್ಥಿತರಿದ್ದರು.