ಕೋಟ : ಗ್ರಾಮೀಣ ಭಾಷೆ ಬದುಕಿನ ವಿಚಾರಧಾರೆ ಉಳಿಸುವುದರ ಜತೆಗೆ ಪರಿಸರ ಕಾಳಜಿ ಸಾಮಾಜಿಕ ಬದ್ಧತೆ ಪಂಚವರ್ಣದ ಕೊಡುಗೆಯಾಗಿದೆ ಎಂದು ಸಮಾಜಸೇವಕ ಪರಿಸರಪ್ರೇಮಿ ವಿನಯಚಂದ್ರ ಸಾಸ್ತಾನ ಹೇಳಿದರು. ಇದೇ ಬರುವ ಅಗಸ್ಟ್ 11ರಂದು ಕೋಟದ ಹಂದಟ್ಟು ಪರಿಸರದಲ್ಲಿ ಕೋಟ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಕಸಾಪ ಬ್ರಹ್ಮಾವರ ತಾಲೂಕು ಘಟಕದ ಸಹಕಾರದೊಂದಿಗೆ ನಡೆಯುವ ಆಸಾಡಿ ಒಡ್ರ್ ಊರ್ ಕೇರಿ ಬದ್ಕಿನ್ ಹಬ್ಬು ಎಂಬ ಶೀರ್ಷಿಕೆ ಕಾರ್ಯಕ್ರಮದ ಪೆÇೀಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮ್ಯ ಭಾಷೆಯ ಅದರ ವಿವಿಧ ಪರಂಪರೆಯನ್ನು ಉಳಿಸಿ ಬೆಳೆಸಿ ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯತೆಯನ್ನು ಒತ್ತಿ ಹೇಳಿದರ ವಿನಯಚಂದ್ರ ಸಮಾಜಮುಖಿ ಕಾರ್ಯಗಳ ನಡುವೆ ಪರಿಸರಸ್ನೇಹಿ ಕಾರ್ಯಗಳನ್ನು ಪ್ರಶಂಸಿದರು.ಕುಂದಗನ್ನಡದ ಎಲ್ಲಾ ಆಯಾಮಗಳನ್ನು ಕಾರ್ಯಕ್ರಮಗಳ ಮೂಲಕ ಪ್ರಚುರಪಡಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಇದೇ ವೇಳೆ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಇದರ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ಆಸಾಡಿ ಒಡ್ರ್ ಪೆÇೀಸ್ಟರ್ ಅನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಸಾಹಿತಿ ನರೇಂದ್ರ ಕುಮಾರ್ ಕೋಟ ಕುಂದಾಪ್ರ ಭಾಷೆ ಅದರ ಬದ್ಕಿನ ಜೀವನ ಶೈಲಿ ವಿಚಾರಗಳ ಬಗ್ಗೆ ಅಧ್ಯಯನ ಅಗತ್ಯವಾಗಿದೆ ಈ ಬಗ್ಗೆ ಈಗಾಗಲೇ ಸರಕಾರದ ಮುಂದೆ ಎಲ್ಲಾ ರೀತಿಯ ಒತ್ತಡಗಳು ಎಲ್ಲಾ ಭಾಗದಿಂದಲೂ ನಡೆಯುತ್ತಿದೆ ನಮ್ಮ ವಿಚಾರಧಾರೆಗಳು ಮುಂದಿನ ಪೀಳಿಗೆಯ ದೃಷ್ಠಿಯಿಂದ ಉಳಿಸಿ ಬೆಳಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಸಮಾಜಸೇವಕಿ ಡಾ.ವಾಣಿಶ್ರೀ ಐತಾಳ್,ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು.ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರೆ,ಸಂಚಾಲಕಿ ಸುಜಾತ ಎಂ ಬಾಯರಿ ನಿರೂಪಿಸಿದರು.ಮಹಿಳಾ ಮಂಡಲದ ಪ್ರಧಾನಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.