Home ಕರಾವಳಿ ಸುದ್ದಿಕೋಟ : ಪಂಚವರ್ಣದ 39ನೇ ರೈತರೆಡೆಗೆ ನಮ್ಮ ನಡಿಗೆ

ಕೋಟ : ಪಂಚವರ್ಣದ 39ನೇ ರೈತರೆಡೆಗೆ ನಮ್ಮ ನಡಿಗೆ

by Kundapur Xpress

ಕೋಟ : ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಜೆಸಿಐ ಸಿನಿಯರ್ ಲಿಜನ್ ಕೊಟ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 39ರ ಸಂಭ್ರಮ, ಆ ಪ್ರಯುಕ್ತ ಸಾಧಕ ಕೃಷಿಕನ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರವನ್ನು ನೀಡಿ ಗೌರವಿಸುವ ಕಾರ್ಯ ಇದೇ ಸೆ.22ರ ಭಾನುವಾರ ಪೂರ್ವಾಹ್ನ 10.00 ಗ ನಡೆಯಲಿದ್ದು ಸಾಂಪ್ರಾದಯ ಕೃಷಿ ಕ್ಷೇತ್ರದ ಸಾಧಕ ಬ್ರಹ್ಮಾವರ ತಾಲೂಕಿನ ಕೋಟದ ಹಾಡಿಕೆರೆ ಚಂದ್ರ ನಾಯ್ಕ್ ಇವರನ್ನು ಗೌರವಿಸುವ ಕಾರ್ಯಕ್ರಮ ಜರಗಲಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles