ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ಬಗ್ಗೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸಿಐಡಿ ತನಿಖೆಯನ್ನು ಸ್ವಾಗತಿಸುವುದಾಗಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆಥೀಮ್ ಪಾರ್ಕ್ಗೆ ಸಂಬಂಧಿಸಿದ ಅನಗತ್ಯ ಸುಳ್ಳು ಊಹಾಪೋಹಗಳಿಗೆ ಒಂದು ಪೂರ್ಣ ವಿರಾಮ ಬೇಕಾಗಿದೆ. ತನಿಖೆ ನಡೆಸುವಂತೆ ಆರು ತಿಂಗಳಿಂದ ನಾನು ಒತ್ತಾಯಿಸುತ್ತಿದ್ದೇನೆ. ಸರ್ಕಾರ ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸಿ ಥೀಮ್ ಪಾರ್ಕನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಿ ಮತ್ತು ಯೋಜನೆಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡಲಿ ಎಂದಿರುವ ಶಾಸಕರು ಸಿಐಡಿ ತನಿಖೆಗೆ ಮುತುವರ್ಜಿ ವಹಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಯರ್ ಅವರಿಗೆ ವಿಶೇಷಧನ್ಯವಾದಗಳನ್ನು ಅರ್ಪಿಸಿದ್ದಾರೆ