Home » ಪೋಷಣ್ ಪಕ್ವಾಡ ಕಾರ್ಯಕ್ರಮ ಆಯೋಜನೆ
 

ಪೋಷಣ್ ಪಕ್ವಾಡ ಕಾರ್ಯಕ್ರಮ ಆಯೋಜನೆ

ಕೋಡಿ ಹೊಸಬೆಂಗ್ರೆ ಅಂಗನವಾಡಿ ಕೇಂದ್ರ

by Kundapur Xpress
Spread the love

ಕೋಡಿ ಹೊಸಬೆಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ ಕಾರ್ಯಕ್ರಮ ಆಯೋಜನೆ
ಕೋಟ: ಕೋಡಿ ಗ್ರಾಮ ಪಂಚಾಯತ್, ಶಿಶುಅಭಿವೃದ್ದಿ ಯೋಜನೆ ಬ್ರಹ್ಮಾವರ, ಅರೋಗ್ಯ ಇಲಾಖೆ ಕೋಡಿ ಬೆಂಗ್ರೆ ಜಂಟಿಯಾಗಿ ಕೇಂದ್ರ ಸರ್ಕಾರದ ಯೋಜನೆಯಡಿ 15ದಿನಗಳ ಕಾಲ ನಡೆಯಲಿರುವ ಪೋಷಣ್ ಪಕ್ವಾಡ ಕಾರ್ಯಕ್ರಮ ಹೊಸಬೆಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಇತ್ತಿಚಿಗೆ ಆಯೋಜಿಸಿತು.
ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾಖಾರ್ವಿ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಿದರು.
ಕೋಡಿ ಗ್ರಾಮಪಂಚಾಯತ್ ಸದಸ್ಯರಾದ ಪ್ರಭಾಕರ ಮೆಂಡನ್, ಸತೀಶ್ ಜಿ ಕುಂದರ್,ಅರೋಗ್ಯ ಇಲಾಖೆ ಪಿಎಚ್‌ಸಿಒ ಅಮಿತಾ ,ಸಿಎಚ್‌ಒ ಪರಸಪ್ಪ, ಸಂಜೀವಿನಿ ಅಧ್ಯಕ್ಷೆ ದೀಪಾಖಾರ್ವಿ, ಅಂಗನವಾಡಿ ಬಾಲಾವಿಕಾಸ ಸಮಿತಿ ಸದಸ್ಯೆ ನಿರ್ಮಲ. ಗರ್ಭಿಣಿಯರಾದ ಮೋನಿಕಾ, ಸ್ಮಿತಾ. ಲಕ್ಷ್ಮೀ ಮತ್ತು ನಿಕಿತಾ, ಶಾರದಾ ಆರ್ ಕುಂದರ್, ಸುಜಾತಾಖಾರ್ವಿ, ಜ್ಯೋತಿ ನೇತ್ರಗಣೇಶ, ಸ್ತಿçಶಕ್ತಿ ಸಂಘದವರು ತಾಯಂದಿರು, ಪೋಷಕರು, ಆಶಾ ಕಾರ್ಯಕರ್ತೆ ಜ್ಯೋತಿ ಉಪಸ್ಥಿತರಿದ್ದರು.
ಅಂಗನವಾಡಿ ಶಿಕ್ಷಕಿ ಯಮುನಾ ಎಲ್ ಕುಂದರ್ ಪ್ರಸ್ತಾವಿಕ ನುಡಿಗಳನ್ನಾಡಿ ನಿರೂಪಣೆಗೈದು ವಂದಿಸಿದರು.

ಕಾರ್ಯಕ್ರಮದ ವಿಶೇಷತೆ:
ಸೀಮಂತ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಉಡಿ ತುಂಬಿ ವಿವಿಧ ತಿನಿಸುಗಳನ್ನು ಬಡಿಸಲಾಯಿತು. ಹಾಗೆ ಅನ್ನಾಪ್ರಾಶಾನ ಕಾರ್ಯಕ್ರಮದಲ್ಲಿ ರಿಧನ್ ಹಾಗೂ ಪ್ರಣೀತಾ ಮಗುಗೆ ಅನ್ನಾ ಪ್ರಾಶಾನ ಮಾಡಲಾಯಿತು.
ಗರ್ಭಿಣಿಯರಿಗೆ ಆರೋಗ್ಯ ತಪಾಸಣೆ ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರದ ವೈದ್ಯಧಿಕಾರಿ ಏರಿಕ್ ಫೆರ್ನಾಂಡೀಸ್ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸೊಪ್ಪು ತರಕಾರಿಗಳು, ಹಣ್ಣುಗಳು, ಹಾಗೂ ವಿವಿಧ ತಿನಿಸುಗಳು ಗಮನ ಸೆಳೆದವು.

 

Related Articles

error: Content is protected !!