Home » ಭಾರತೀಯ ಅಂಚೆ : ಒಂದೇ ಸೂರು ಸೇವೆ ಹಲವಾರು
 

ಭಾರತೀಯ ಅಂಚೆ : ಒಂದೇ ಸೂರು ಸೇವೆ ಹಲವಾರು

by Kundapur Xpress
Spread the love

ಕುಂದಾಪುರ  : ಅಂಚೆ ಇಲಾಖೆ ಕುಂದಾಪುರ ಉತ್ತರ ಉಪ ವಿಭಾಗ, ಮರವಂತೆ ಗ್ರಾ.ಪಂ. ನ ಸಹಯೋಗದಲ್ಲಿ ಮರವಂತೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಡಾಕ್ ಸೇವಾ ಜನ್ ಸೇವಾ-ಒಂದೇ ಸೂರು ಸೇವೆ ಹಲವಾರು – ಅಂಚೆ ಜನ ಸಂಪರ್ಕ ಅಭಿಯಾನ ಅ.16 ರಂದು ಬೆಳಗ್ಗೆ 9 ರಿಂದ ಸಂಜೆ 4.30ರ ವರೆಗೆ ನಡೆಯಲಿದೆ. ಈ ಅಭಿಯಾನದಲ್ಲಿ ಆಧಾರ್-ಹೊಸ ನೋಂದಣಿ/ಪರಿಷ್ಕರಣೆ ಮತ್ತು ಎಲ್ಲ ರೀತಿಯ ತಿದ್ದುಪಡಿ, 18-65 ವರ್ಷದವರಿಗೆ ಅತ್ಯಲ್ಪ ವಾರ್ಷಿಕ ಪ್ರೀಮಿಯಂ ದರದಲ್ಲಿ 15 ಲಕ್ಷ / 10 ಲಕ್ಷ ರೂ. ಆದಿತ್ಯ ಬಿರ್ಲಾ ಸಮಗ್ರ ರಕ್ಷಣ ಅಪಘಾತ ವಿಮಾ ಯೋಜನೆ ನೊಂದಣಿ, ಸರಕಾರದ ವಿವಿಧ ಯೋಜನೆಗಳ ಡೈರೆಕ್ಟ್ ಬೆನಿಫಿಟ್ ಟ್ರಾನ್ ಫರ್ ಫಲಾನುಭವಿಗಳಿಗೆ ಐಪಿಪಿಬಿ ಅಂಚೆ ಆನ್‌ಲೈನ್ ಖಾತೆಗಳ ತೆರೆಯುವಿಕೆ, ಅಂಚೆ ಉಳಿತಾಯ/ವಿಮಾ ಸೌಲಭ್ಯಗಳು ಸೇರಿದಂತೆ ಇತರ ಎಲ್ಲ ಅಂಚೆ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಕೂಡ ಆಯೋಜಿಸಲಾಗಿದೆ. ಸಾರ್ವಜನಿಕರು ಆಧಾರ್ ಪ್ರತಿ, ಪಾನ್ ಕಾರ್ಡ್ ಪ್ರತಿ, ಗುರುತು ಪತ್ರ, ಪಾಸ್‌ಪೋರ್ಟ್ ಗಾತ್ರದ ಫೋಟೊ-2, ಸುಕನ್ಯಾ (ಎಸ್‌ಎಸ್‌ಎ)- ಸುಕುಮಾರ (ಪಿಪಿಎಫ್) ಸಮೃದ್ಧಿ ಖಾತೆ ತೆರೆಯಲು ಮಗುವಿನ ಜನನ ಪ್ರಮಾಣ ಪತ್ರ ಮತ್ತು ಆಧಾ‌ರ್ ಪ್ರತಿಯನ್ನು ತರಬೇಕು. ಹೆಚ್ಚಿನ ವಿವರಗಳಿಗೆ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು

   

Related Articles

error: Content is protected !!