ಕುಂದಾಪುರ : ನಗರದ ಶ್ರೀ ರಾಮಕ್ಷತ್ರಿಯ ಯುವಕ ಮಂಡಳಿಯ 58ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ನಡೆದ 4 ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ 5ನೇ ದಿನವಾದ ಇಂದು ವೈಭವದ ಶೋಭಾಯಾತ್ರೆಯು ನಡೆಯಲಿದೆ ಇಂದು ಸಂಜೆ 5:00 ಗಂಟೆಗೆ ರಾಮ ಮಂದಿರದಿಂದ ಹೊರಡುವ ಮೆರವಣಿಗೆಯು ನಗರದ ಮುಖ್ಯರಸ್ತೆಯಲ್ಲಿ ಸಾಗಿ ಶಾಸ್ತ್ರಿ ಪಾರ್ಕಿನಲ್ಲಿ ತಿರುಗಿ ಪಾರಿಜಾತ ಸರ್ಕಲ್ ಹಳೆ ಬಸ್ಟಾಂಡ್ ಹೊಸ ಬಸ್ಟ್ಯಾಂಡ್ ಮೂಲಕ ಸಾಗಿ ಪಂಚ ಗಂಗಾವಳಿ ನದಿಯಲ್ಲಿ ಜಲಸ್ತಂಭ ಗೊಳಿಸಲಾಗುವುದು ಎಂದು ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷರಾದ ಮಹೇಶ್ ಬೆಟ್ಟಿನ್ ರವರು ತಿಳಿಸಿದ್ದಾರೆ
ಸ್ಯಾಕ್ಸೋಫೋನ್ ಚಂಡೆ ಕೊಂಬು ಕೀಲುಕುದುರೆ ಗೊಂಬೆ ಕುಣಿತ ಹಾಗೂ ವಿವಿಧ ಸಂಸ್ಥೆಗಳ ಸ್ಥಬ್ಧಚಿತ್ರಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದೆ
ಶೋಭಾಯಾತ್ರೆಯಲ್ಲಿ ರಾಮಕ್ಷತ್ರಿಯ ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಯುವಕ ಮಂಡಳಿಯ ಅಧ್ಯಕ್ಷರಾದ ಮಹೇಶ್ ಬೆಟ್ಟಿನ್ ಹಾಗೂ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ಡಿ ಕೆ ಪ್ರಭಾಕರ್ ಮನವಿ ಮಾಡಿದ್ದಾರೆ