ಕುಂದಾಪುರ : ಕುಂದಾಪುರದ ತ್ರಾಸಿ ಬಳಿಯ ಮರವಂತೆ ಬೀಚ್ಗೆ ಪ್ರವಾಸಿಗರು ಇಳಿಯದಂತೆ ಮುಂಜಾಗ್ರತ ಕ್ರಮವಾಗಿ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿಯಾದ ಹರೀಶ್ ಆರ್ ನಾಯಕ್ ಮತ್ತು ಸಿಬ್ಬಂದಿಗಳು ಕೆಂಪು ಬಣ್ಣದ ರಿಬ್ಬನ್ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ
ಬೀಚ್ ಬಳಿ ಬಂದು ಸೆಲ್ಫಿ ಕ್ಲಿಕ್ಕಿಸುವ ಪ್ರವಾಸಿಗರನ್ನು ಕರೆದು ಎಚ್ಚರಿಕೆಯನ್ನು ನೀಡಿ ವಾರದ ಹಿಂದೆ ನಡೆದ ದುರಂತವನ್ನು ವಿವರಿಸಿದ್ದಾರೆ ಯಾವುದೇ ಕಾರಣಕ್ಕೂ ರಿಬ್ಬನ್ ದಾಟಿ ಮುಂದೆ ಹೋಗದೆ ಎಚ್ಚರಿಕೆ ವಹಿಸುವಂತೆ ಕಡಕ್ ಮಾತುಗಳನ್ನಾಡಿದ್ದಾರೆ ಒಂದು ವೇಳೆ ರಿಬ್ಬನ್‌ನನ್ನು ದಾಟಿ ಮುಂದೆ ನಿಷೇದಿತ ಪ್ರದೇಶದ ಬೀಚಿಗೆ ಇಳಿದರೆ ಅವರಿಗೆ ದಂಡ ವಿಧಿಸಲಾಗುವುದು ಎಂದು ಠಾಣಾಧಿಕಾರಿ ಹರೀಶ್ ಆರ್ ನಾಯಕ್ ತಿಳಿಸಿದ್ದಾರೆ