ಕುಶಾಲನಗರ : ಶ್ರೀ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರ ಮಹೋನ್ನತ ಧಾರ್ಮಿಕ ಜಾಗತಿಕ ಸಂಕಲ್ಪ ಕೋಟಿ ಗೀತಾ ಲೇಖನ ಯಜ್ಞಕ್ಕೆ 1008 ಯಜ್ಞಕರ್ತರನ್ನು ನೋಂದಣಿ ಮಾಡಿಸಲು ಸ್ವತಃ ಶ್ರೀಪಾದರು ಪ್ರತಿಜ್ಞೆ ವಿಧಿ ಬೋಧಿಸಿದರು. ಕಿರಿಯ ಪಟ್ಟದ ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರೂ ಉಪಸ್ಥಿತರಿದ್ದರು ಈ ಬೃಹತ್ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ಕುಶಾಲನಗರದ ಸಂಕರ್ಷಣ ಪ್ರಖಂಡ ಕೋಟಿ ಗೀತಾ ಲೇಖನ ಯಜ್ಞ ಪರಿವಾರ ಆಯೋಜಿಸಿತ್ತು ಡಿಸೆಂಬರ್ 27 ರಂದು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಖಲೆಯ 1008 ಯಜ್ಞಕರ್ತರು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಗೀತೆಯು ಜೀವನ ಪಯಣದಲ್ಲಿ ದಾರಿದೀಪವಿದ್ದಂತೆ. ಅದು ನಮ್ಮನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತದೆ. ಗೀತೆಯನ್ನು ಓದುವುದರಿಂದ ಮನಸ್ಸು ದೃಢವಾಗಿ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಗೀತೆಯನ್ನು ಓದಿದರೆ ಜೀವನವನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ಪೂರಕವಾಗಲಿ ಹಾಗೂ ಭಗವದ್ಗೀತೆ ಬರೆಯುವ ಮೂಲಕ ತಮ್ಮ ಬೌದ್ಧಿಕ ಸ್ತರವನ್ನು ವಿಸ್ತಾರ ಮಾಡಿಕೊಳ್ಳಲು ಉತ್ತಮ ಅವಕಾಶ, 1,008 ಭಕ್ತರು ದೀಕ್ಷೆ ಸ್ವೀಕರಿಸಿದ್ದೀರಿ ಇದರ ಹತ್ತು ಪಟ್ಟು ಭಕ್ತರಿಗೆ ಪ್ರತಿಜ್ಞೆ ವಿಧಿ ಬೋಧಿಸುವ ಸಂಕಲ್ಪವಾಗಬೇಕು ಎಂದು ಆಶೀರ್ವಚನ ನೀಡಿದರು.